52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !

Sun, 27 Oct 2024-7:09 am,
Tabu Marriage

ಬಾಲಿವುಡ್ ನಟಿ ತಬು ಮದುವೆ ಆಗಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ. 52 ವರ್ಷ ವಯಸ್ಸಿನಲ್ಲಿ ನಟಿ ತಬು ಹಸೆಮಣೆ ಏರಲಿರುವ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡುತ್ತಿದೆ.

Tabu Marriage

ಹಲವು ವರ್ಷಗಳ ನಂತರ ನಟಿ ತಬು ಶುಭ ಸುದ್ದಿ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಕೆ ಕೆಲ ದಿನಗಳಿಂದ ಬಾಲಿವುಡ್ ಹೀರೋ ಒಬ್ಬರನ್ನು ಗುಟ್ಟಾಗಿ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.  

Tabu Marriage

ಬಾಲಿವುಡ್ ನಟಿ ತಬು ವಯಸ್ಸು ಐವತ್ತು ದಾಟಿದರೂ ತುಂಬಾ ಹಾಟ್ ಎನ್ನಬಹುದು. ಈ ನಟಿ ಇಂದಿಗೂ ಯುವಕರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಿರಿಯ ನಟಿ ತಬು ಅವರಿಗೆ ಬಾಲ್ಯದಿಂದಲೂ ಸಿನಿಮಾಗಳ ಬಗ್ಗೆ ಆಸಕ್ತಿ ಇತ್ತು. ಅದಕ್ಕಾಗಿಯೇ ಅವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು.   

ತಬು ಅಭಿನಯಕ್ಕೆ ಮನಸೋಲದವರಿಲ್ಲ. ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದವರು ತಬು. ಅಕ್ಕಿನೇನಿ ನಾಗಾರ್ಜುನ ಜೊತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾದ ನಂತರ ಇಬ್ಬರ ನಡುವೆ ಪ್ರೀತಿ ಮೂಡಿದೆ ಎಂಬ ವದಂತಿ ಹರಡಿತ್ತು.   

ನಾಗಾರ್ಜುನ ಮತ್ತು ತಬು ನಡುವೆ ರಹಸ್ಯ ಸಂಬಂಧ ಇತ್ತು ಎಂದು ಹೇಳಲಾಗಿತ್ತು. ತಬು ನಾಗಾರ್ಜುನರನ್ನು ಮದುವೆಯಾಗಲು ಬಯಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ನಾಗಾರ್ಜುನ ಜೊತೆ ಮದುವೆ ಆಗಲಿಲ್ಲ ಎಂಬ ವದಂತಿಗಳು ಹಬ್ಬಿದವು.   

ತಬು ಹಲವು ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಬು ರೊಮ್ಯಾನ್ಸ್ ದೃಶ್ಯಗಳ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ರೊಮ್ಯಾಂಟಿಕ್ ಆ್ಯಂಗಲ್‌ನಲ್ಲಿ ಚಿತ್ರೀಕರಿಸಬೇಕಾದರೆ ನಾನು ಅದಕ್ಕೆ ಸಿದ್ಧ ಎಂದು ಬೋಲ್ಡ್ ಕಮೆಂಟ್ಸ್ ಮಾಡಿದ್ದಾರೆ. ರೊಮ್ಯಾನ್ಸ್ ಗೂ ವಯಸ್ಸಿಗೂ ಸಂಬಂಧವಿಲ್ಲ ಎಂದಿದ್ದಾರೆ.  

ತಬು ಅವರನ್ನು ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಲೇಡಿ ಬ್ಯಾಚುಲರ್ ಎಂದು ಕರೆಯಬಹುದು. 52ರ ಹರೆಯದಲ್ಲೂ ಈ ಹಿರಿಯ ನಟಿ ಇನ್ನೂ ಮದುವೆಯಾಗಿಲ್ಲ. ಅದೇನೇ ಇರಲಿ.. ಈ ಹಿಂದೆ ನಟ ಅಜಯ್ ದೇವಗನ್ ಜೊತೆ ಲವ್ ಅಫೇರ್ ಇತ್ತು ಎಂಬ ಗಾಳಿಸುದ್ದಿ ಈಗಲೂ ಜೀವಂತವಾಗಿದೆ.   

ಆದ್ರೆ, ನಟಿ ತಬು 52ನೇ ವಯಸ್ಸಿಗೆ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಸದ್ದು ಮಾಡಿದೆ. ಅದೂ ಅಲ್ಲದೆ ಆಕೆ ತನಗಿಂತ ಚಿಕ್ಕ ವಯಸ್ಸಿನ ಬಾಲಿವುಡ್ ನಟರೊಬ್ಬರನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಯಾವುದೇ ಅಧಿಕೃತ ಮಾಃಇತಿ ಹೊರಬಿದ್ದಿಲ್ಲ.    

ಆದರೆ... ನಟಿ ತಬು ತಾನು ಹೈದರಾಬಾದಿ ಎಂದು ಆಗಾಗ ಹೇಳುತ್ತಿರುತ್ತಾರೆ. ಅವರು ಹೈದರಾಬಾದ್‌ನ ಸೇಂಟ್ ಆನ್ಸ್ ಹೈಸ್ಕೂಲ್‌ನಲ್ಲಿ ಓದಿದ್ದಾರೆ. ಸದ್ಯ ತಬು ಮದುವೆ ಸುದ್ದಿಯಲ್ಲಿ ಸಸ್ಪೆನ್ಸ್ ಮುಂದುವರೆಯಲಿದೆ ಎನ್ನಬಹುದು. (ಗಮನಿಸಿ: ಮೇಲಿನ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ವೈರಲ್ ವಿಷಯವನ್ನು ಆಧರಿಸಿ ಮಾತ್ರ ಉಲ್ಲೇಖಿಸಲಾಗಿದೆ. ಇದನ್ನು Zee ಮೀಡಿಯಾ ಪರಿಶೀಲಿಸಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link