Manvitha Kamath: ಕೊಡೈಕೆನಾಲ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಟಗರು ಪುಟ್ಟಿ
ನಟಿ ಮನ್ವಿತಾ ಕಾಮತ್ ಸಿನಿಮಾಗಳ ಮಧ್ಯೆ ಬ್ರೇಕ್ ತೆಗೆದುಕೊಂಡು ಕೊಡೈಕೆನಾಲ್‌ಗೆ ತೆರೆಳಿದ್ದು, ಅಲ್ಲಿ ಸಖತ್ ಖುಷಿಯಾಗಿ ಎಂಜಾಯ್ ಮಾಡ್ತಾಯಿದ್ದಾರೆ. ಇವರು ಅಲ್ಲಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹಚ್ಚ ಹಸಿರಿನ ಮಧ್ಯೆ ಇರುವ ಒಂದು ರೆಸಾರ್ಟ್ ಬಳಿ ಫೋಟೋಗಳನ್ನು ತೆಗೆಸಿಕೊಂಡಿದ್ದು, ಹಲವಾರು ಡಿಫರೆಂಟ್ ಡಿಫರೆಂಟ್ ಸ್ಟೈಲ್‌ನಲ್ಲಿ ಪೋಸ್ ನೀಡುವುದರ ಮೂಲಕ ಗಮನ ಸೆಳೆದಿದ್ದಾರೆ.
ನಟಿ ಮಾನ್ವಿತಾ ಫೋಟೋಗಳಲ್ಲಿ ಹಸಿರು ಬಣ್ಣದ ಶಾರ್ಟ್ ಗೌನ್ ಹಾಗೂ ಬ್ಲೇಜರ್ ಧರಿಸಿ ಪರಿಸರ ಮಧ್ಯೆ ಕಂಗೋಳಿಸುತ್ತಿದ್ದಾರೆ.
ಮನ್ವಿತಾ ತಮ್ಮ ಹಲವಾರು ಸ್ನೇಹಿತರ ಜೊತೆಗೆ ಕೊಡೈಕೆನಾಲ್ ಪ್ರವಾಸ ಮಾಡಿದ್ದು, ಅಲ್ಲಿಯ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡ್ತಾಯಿದ್ದಾರೆ.
ಮನ್ವಿತಾ ಕಾಮತ್ ಹಸಿರು ಹುಲ್ಲಿನ ಮೇಲೆ ಜಮಖಾನ ಹಾಸಿಕೊಂಡು ಅದರ ಮೇಲೆ ಕೂತು ಫೋಟೋಗೆ ಪೋಸ್ ನೀಡಿದ್ದಾರೆ. ಅವರ ಪಕ್ಕದಲ್ಲಿಯೇ ಇದ್ದ ಒಂದು ದೊಡ್ಡ ಛತ್ರಿಯು ಸಹ ಆಕರ್ಷಕವಾಗಿದೆ.
ಟಗರು ಪುಟ್ಟಿ ಮಾನ್ವಿತಾ ಮೊದಲು ರೆಡಿಯೋ ಮಿರ್ಚಿಯಲ್ಲಿ ರೆಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದು, ನಂತರ ಕೆಂಡಸಂಪಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದರ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ.
ಮನ್ವಿತಾ ಮೂಲತಃ ಮಂಗಳೂರಿನಲ್ಲಿ ಜನಿಸಿದರು, ಈಕೆ ಬೆಳೆದಿದ್ದ ಚಿಕ್ಕಮಗಳೂರಿನಲ್ಲಿ ಬೆಳೆದಿದ್ದಾರೆ. ಇವರು ಕೊನೆಯದಾಗ ಶಿವ 143 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.