Graha Dosha: ಪ್ರಾಣಿ ಸೇವೆಯಿಂದಲೂ ಸಿಗುತ್ತೆ ಗ್ರಹ ದೋಷದಿಂದ ಮುಕ್ತಿ
ಗ್ರಹ ದೋಷ: ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹ ದೋಷ ನಿವಾರಣೆಗೆ ಸಂಬಂಧಿಸಿದಂತೆ ಹಲವು ಪರಿಹಾರಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಪ್ರಾಣಿ ಸೇವೆ: ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪ್ರಾಣಿಗಳು ಮತ್ತು ಪಕ್ಷಿಗಳ ಸೇವೆಯನ್ನು ಮಾಡುವುದರಿಂದ ಕೆಲವು ಗ್ರಹಗ ದೋಷದಿಂದ ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಪ್ರಾಣಿ ಸೇವೆಯಿಂದ ಧನಾತ್ಮಕ ಶಕ್ತಿ: ಪ್ರಾಣಿಗಳ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದಲ್ಲದೆ ಅನೇಕ ಗ್ರಹದೋಷಗಳಿಂದ ಮುಕ್ತಿ ದೊರೆಯುತ್ತದೆ. ಮಾತ್ರವಲ್ಲ, ಪ್ರಾಣಿಗಳ ಸೇವೆಯು ಧನಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಬೀದಿ ನಾಯಿಗೆ ಆಹಾರ: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೀದಿ ನಾಯಿಗೆ ಆಹಾರ ನೀಡುವುದರಿಂದ ಗ್ರಹ ದೋಷಗಳಿಂದಾಗಿ ಉಂಟಾಗುವ ಕೆಲವು ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಶನಿ ದೋಷ ನಿವಾರಣೆಗೆ ಶ್ವಾನ ಸೇವೆ: ಶ್ವಾನ ಸೇವೆ ಅದರಲ್ಲೂ ಕಪ್ಪಿ ನಾಯಿಗಳ ಸೇವೆ ಮಾಡುವುದರಿಂದ ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡಬಹುದು. ಜೊತೆಗೆ ಶನಿ ಮಹಾತ್ಮನ ಆಶೀರ್ವಾದವನ್ನೂ ಪಡೆಯಬಹುದು ಎನ್ನಲಾಗುತ್ತದೆ.
ಲಕ್ಷ್ಮಿ ಅನುಗ್ರಹ: ನಾಯಿಯು ಭಗವಾನ್ ಶಿವನ ಉಗ್ರ ರೂಪವಾದ ಭೈರವನ ವಾಹನ. ಮಾತ್ರವಲ್ಲ, ಭೈರವ ತಾಯಿ ಲಕ್ಷ್ಮೀದೇವಿಯ ರಕ್ಷಕನೂ ಹೌದು. ಹಾಗಾಗಿ, ನಾಯಿ ಸೇವೆ ಮಾಡುವುದರಿಂದ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯಬಹುದು ಎನ್ನಲಾಗುತ್ತದೆ.
ಕೇತು ದೋಷ ನಿವಾರಣೆ: ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಕೇತು ದೋಷವನ್ನು ನಿವಾರಿಸಬಹುದು. ಜೊತೆಗೆ ಜಾತಕದಲ್ಲಿ ಕೇತು ಗ್ರಹವನ್ನು ಬಳಪಡಿಸಬಹುದು ಎಂಬ ನಂಬಿಕೆಯಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.