Home Loan: ಗೃಹ ಸಾಲ ಪಡೆಯುವಾಗ ಈ ಟ್ರಿಕ್ಸ್ ಅನುಸಿರಿಸಿದರೆ ಲಕ್ಷಾಂತರ ರೂ. ಉಳಿಸಬಹುದು!
ಮನೆ ಕಟ್ಟುವ/ಖರೀದಿಸುವ ಕನಸನ್ನು ನನಸಾಗಿಸಲು ಗೃಹಸಾಲಗಳು ಹಣಕಾಸಿನ ನೆರವನ್ನು ಒದಗಿಸುತ್ತದೆ. ನೀವು ಗೃಹ ಸಾಲ ಪಡೆಯುವಾಗ ಕೆಲವು ಪುಟ್ಟ-ಪುಟ್ಟ ವಿಚಾರಗಳ ಬಗ್ಗೆ ನಿಗಾವಹಿಸುವುದರಿಂದ ಬಡ್ಡಿಯ ಹಣದಲ್ಲಿ ಲಕ್ಷ ರೂಪಾಯಿಯಷ್ಟು ಹಣ ಉಳಿಸಬಹುದು. ಅಂತಹ 5 ಪ್ರಮುಖ ಟ್ರಿಕ್ ಗಳೆಂದರೆ...
ಗೃಹ ಸಾಲ ಪಡೆದಾಗ ಆ ಸಾಲವನ್ನು ತೀರಿಸಲು 30 ವರ್ಷಗಳವರೆಗೆ ಕಾಲಾವಕಾಶವಿರುತ್ತದೆ. ನೀವು ಹೆಚ್ಚಿನ ವರ್ಷಗಳವರೆಗೆ ಸಾಲದ ಅವಧಿಯನ್ನು ಹೊಂದಿದರೆ ತಿಂಗಳ EMI ಕಡಿಮೆಯಾಗುತ್ತದೆ. ಆದರೆ, ಹೆಚ್ಚಿನ ಬಡ್ಡಿ ಪಾವತಿಸುತ್ತೀರಿ.
ಒಂದೊಮ್ಮೆ ನೀವು ದೀರ್ಘಾವಧಿಯವರೆಗೆ ಹೋಮ್ ಲೋನ್ ಪಡೆದಿದ್ದರೂ ಸಹ ಹಣ ಹೊಂದಿಕೆಯಾದಂತೆ ಸಾಲವನ್ನು ಮರುಪಾವತಿ ಮಾಡಲು ಪ್ರಯತ್ನಿಸಿ. ಇದು ಸಾಲದ ಅವಧಿಯನ್ನು ಕಡಿಮೆ ಮಾಡುವುದಲ್ಲದೆ, ಲಕ್ಷ ರೂ.ಗಳಷ್ಟು ಹಣವನ್ನು ಉಳಿತಾಯ ಮಾಡುತ್ತದೆ.
ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಹೆಂಡತಿಯ ಹೆಸರನ್ನೂ ಅದರಲ್ಲಿ ಸೇರಿಸಿ ಜಂಟಿ ಸಾಲವನ್ನು ತೆಗೆದುಕೊಳ್ಳಿ. ಜಂಟಿ ಸಾಲದಲ್ಲಿ ಬಡ್ಡಿದರ ಕಡಿಮೆ ಇರುತ್ತದೆ. ಮಹಿಳೆಯರ ಹೆಸರಿನಲ್ಲಿ ಪಡೆಯುವ ಗೃಹ ಸಾಲಕ್ಕೆ 5 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಬಡ್ಡಿ ಸೌಕರ್ಯ ಲಭ್ಯವಿದೆ.
ನೀವು ಹೋಮ್ ಲೋನ್ ಕೊಳ್ಳುವಾಗ ತಪ್ಪದೇ ಗೃಹ ಸಾಲ ವಿಮೆಯನ್ನು ತೆಗೆದುಕೊಳ್ಳಿ. ಕಷ್ಟದ ಸಮಯದಲ್ಲಿ ಇದು ನಿಮ್ಮ ಕುಟುಂಬಸ್ಥರಿಗೆ ಸಹಾಯಕವಾಗಿದೆ.
ಗೃಹ ಸಾಲದ ಬಡ್ಡಿದರಗಳು ಬದಲಾದಂತೆ ಅದರಲ್ಲೂ ಬಡ್ಡಿದಾರ ಹೆಚ್ಚಾದಾಗ ನೀವು ಬ್ಯಾಂಕ್‌ನೊಂದಿಗೆ ಮಾತನಾಡಿ ಹೋಮ್ ಲೋನ್ ಪುನರ್ರಚಿಸಬೇಕು. ಯಾವುದೇ ಕಾರಣಕ್ಕೂ ಸಾಲದ ಅವಧಿಯನ್ನು ವಿಸ್ತರಿಸಬೇಡಿ. ಈ ಟ್ರಿಕ್ಸ್ ಅನುಸರಿಸಿದರೆ ನೀವು ಕನಿಷ್ಠ ಎಂದರೂ ಲಕ್ಷ ರೂ.ವರೆಗೆ ಹಣ ಉಳಿತಾಯ ಮಾಡಬಹುದು.