ಬಾಲಿವುಡ್‌ನಲ್ಲಿ ಬ್ರೇಕ್ ಅಪ್‌ಗಳದ್ದೇ ಸದ್ದು..ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಸ್ಟಾರ್ ಜೋಡಿ..!
ಬಾಲಿವುಡ್‌ನಲ್ಲಿ ಬ್ರೇಕ್ ಅಪ್ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗಷ್ಟೆ ಬಾಲಿವುಡ್ ಸ್ಟಾರ್ಸ್ ಆಗಿರುವ ಮಲೈಕಾ ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕ್ ಅಪ್ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು, ಇದರ ನಡುವ ಇದೀಗ ಮತ್ತೊಂದು ಜೋಡಿ ಬ್ರೇಕ್ ಅಪ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದು, ಬೇರೆ ಯಾರೂ ಅಲ್ಲ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ.
ಹೌದು, ತಮನ್ನಾ ಮತ್ತು ವಿಜಯ್ ಇಬ್ಬರೂ ದೂರವಾಗಿದ್ದಾರೆ ಎಂಬ ವರದಿಗಳು ಬಂದಿವೆ. ಯಾಕೆ ಹೀಗೆ ಹೇಳಲಾಗುತ್ತಿದ್ದೇವೆ ಅಂತೀರಾ..? ಇತ್ತೀಚೆಗೆ ಅಂಬಾನಿ ಕುಟುಂಬದಲ್ಲಿ ಅದ್ಧೂರಿ ಮದುವೆ ಸಂಭ್ರಮ ನಡೆಯಿತು. ಈ ಮದುವೆಯಲ್ಲಿ ಹಲವು ತಾರೆಯರು ಪಾಲ್ಗೊಂಡಿದ್ದರು. ಪವರ್ ಕಪಲ್ ಎಂದು ಕರೆಯಲ್ಪಡುವ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಕೂಡ ಈ ಮುದುವೆ ಸಮಾರಂಭದ ಭಾಗವಾಗಿದ್ದರು.
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಯಾವುದೇ ಸಮಾರಂಭವಿರಲಿ, ಈ ಜೋಡಿ ಯಾವಾಗಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಅಂಬಾನಿ ಸಮಾರಂಭದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದ ಕಾರಣಕ್ಕಾಗಿ ಅಭಿಮಾನಿಗಳ ಇವರ ನಡೆಯನ್ನು ಅನುಮಾನಿಸಿದ್ದಾರೆ.
ಬಹುಶಃ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಇಬ್ಬರೂ ಪರಸ್ಪರ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ವರದಿಗಳಿವೆ. ಆದರೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳದಿರುವುದು ಬ್ರೇಕಪ್‌ಗೆ ಜೋಡಿ ಮುನ್ನುಡಿ ಬರೆದಿದ್ದಾರೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಅದೇನೇ ಇರಲಿ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಬ್ರೇಕಪ್‌ಗಳು ನಡೆಯುತ್ತಿವೆ.
ತಮನ್ನಾ ಭಾಟಿಯಾ ಇತ್ತೀಚೆಗೆ ಸ್ತ್ರೀ 2 ರ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಟುನೈಟ್ ಹಾಡು ಸಾಕಷ್ಟು ಜನಪ್ರಿಯವಾಗುತ್ತಿದೆ ಮತ್ತು ಅವರ ಡ್ಯಾನ್ಸ್ ಸ್ಟೆಪ್ಸ್ ನೋಡಲೇಬೇಕು. ಈ ಹಾಡನ್ನು ಮಧುಬಂತಿ ಬಾಗ್ಚಿ ಹಾಡಿದ್ದಾರೆ ಮತ್ತು ಸಚಿನ್-ಜಿಗರ್ ಜೋಡಿ ಸಂಯೋಜಿಸಿದ್ದಾರೆ.