Tamannaah Bhatia: ಶೀಘ್ರದಲ್ಲೇ ದಾಂಪತ್ಯಕ್ಕೆ ಹೆಜ್ಜೆಹಾಕಲು ಸಜ್ಜಾದ ಮಿಲ್ಕಿ ಬ್ಯೂಟಿ: ಮದುವೆ ಯಾವಾಗ ಗೊತ್ತೇ?

Tue, 19 Mar 2024-6:35 pm,

 ಸೌತ್‌ ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಇತ್ತೀಚೆಗೆ ʻಮರ್ಡರ್ ಮುಬಾರಕ್’ ಸ್ಪೆಷಲ್ ಶೋನಲ್ಲಿ ಭಾಗಿಯಾಗಿದ್ದು, ಇಬ್ಬರು ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಫೋಟೋ ಹಾಗೂ ವಿಡಿಯೋ ನೋಡಿದ ನೆಟ್ಟಿಗರು ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.  

ನಟಿ ತಮನ್ನಾ ನೆಟ್ಟಿಗರ ಪ್ರಶ್ನೆಗೆ ಶೀಘ್ರದಲ್ಲೇ ಮದುವೆಯಾಗಲು ಸಿದ್ಧರಾಗಿದ್ದು ಮತ್ತು ಈ ಜೋಡಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.  

ನಟಿ ತಮನ್ನಾ ಹಾಗೂ ವಿಜಯ್‌ ವರ್ಮಾ ಅದ್ಧೂರಿಯಾಗಿ ಸಪ್ತಪದಿ ತುಳಿಯಲು ಹೋಟೆಲ್ ಅಥವಾ ರೆಸಾರ್ಟ್ ಗಳನ್ನು ಹುಡುಕುತ್ತಿದ್ದು, ಶೀಘ್ರದಲ್ಲೇ ಈ ಜೋಡಿ ತಮ್ಮ ಮದುವೆಯ ಸ್ಥಳ ಮತ್ತು ದಿನಾಂಕವನ್ನು ಅನೌನ್ಸ್ ಮಾಡಲಿದ್ದಾರೆ.

ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಲಸ್ಟ್ ಸ್ಟೋರಿಸ್ 2 ವೆಬ್ ಸೀರಿಸ್‌ನಲ್ಲಿ ಅಭಿನಯಿಸಿದ್ದರು. ಈ ಜೋಡಿ ವೆಬ್ ಸೀರಿಸ್‌ನಲ್ಲಿ ಬಣ್ಣ ಹಚ್ಚುವುದಕ್ಕೂ ಮುಂಚೆಯೇ ಇಬ್ಬರು  ಪ್ರೀತಿಗಲಿ ಬಿದ್ದಿದ್ದರು.

ಬಹುಭಾಷಾ ನಟಿ ತಮನ್ನಾ ಲವ್ ಲೈಫ್ ವಿಚಾರದಿಂದಲೇ ಹೆಚ್ಚು ಸುದ್ದಿಯಾಗಿದ್ದು, ಬಾಲಿವುಡ್ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟನ ಜೊತೆ ಈ ನಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹರಿದಾಡುತ್ತಿತ್ತು.  

ಸೌತ್‌ ಸುಂದರಿ ತಮನ್ನಾ ಹಾಗೂ ನಟ ವಿಜಯ್‌ ವರ್ಮಾ ಅಫೇರ್ ಮತ್ತು ರಿಲೇಶನ್ ಶಿಪ್ ಸುದ್ದಿ ಹೊರಬಿದ್ದ ನಂತರ, ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ದಿನಗಳಿಂದ ಟ್ರೆಂಡಿಂಗ್ ನಲ್ಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link