ಅನಂತ್ ಅಂಬಾನಿ ಮದುವೆಯಲ್ಲಿ ಬ್ಲ್ಯಾಕ್ ಲೆಹಂಗಾದಲ್ಲಿ ಮಿಂಚಿದ ತಮನ್ನಾ..! ಅದರ ಬೆಲೆ ಲಕ್ಷಕ್ಕೂ ಮೀರಿದ್ದು..
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಜುಲೈ 12ರಂದು ನಡೆದ ಅದ್ದೂರಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಗೆ ವಿವಿಧ ಕ್ಷೇತ್ರಗಳಿಂದ ಗಣ್ಯರು ಆಗಮಿಸಿದ್ದರು.
ವಿವಾಹ ಸಮಾರಂಭಕ್ಕೆ ಬಾಲಿವುಡ್ ನ ಹಲವು ನಟ ನಟಿಯರು ಭಾಗವಹಿಸಿದ್ದರು, ಅದರಲ್ಲಿ ನಟಿ ತಮನ್ನಾ ಕೂಡ ಭಾಗವಹಿಸಿದ್ದರು.
ಸೌತ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದಿರುವ ಮಿಲ್ಕ್ ಬ್ಯೂಟಿ, ತಮ್ಮನ್ನಾ ತೆಲುಗು ಚಿತ್ರಗಳಲ್ಲಿ ನಟಿಸಿ ಬಾಲಿವುಡ್ ನಲ್ಲಿ ಪಾದರ್ಪಣೆ ಮಾಡಿದ್ದಾರೆ
ಬ್ಲಾಕ್ ಕಲರ್ ಲೆಹೆಂಗಾ ದಲ್ಲಿ ಕಾಣಿಸಿಕೊಂಡ ತಮನ್ನಾ ಹಾಟ್ ಆಗಿ ಕಾಣಿಸಿಕೊಂಡರು. ಲೆಹೆಂಗಾ ಲುಕ್, ಹೇರ್ ಸ್ಟೈಲ್, ಜ್ಯುವೆಲರಿ ಸುಂದರವಾಗಿ ಕಾಣುವಂತೆ ಮಾಡಿತ್ತು.
ಕರಣ್ ಥೋರಾಣಿ ವಿನ್ಯಾಸ ಗಳಿಸಿದ ಗೋಲ್ಡನ್ ವರ್ಕ್ ಕಪ್ಪು ಲೆಹೆಂಗಾ ಬೆಲೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳು. ಲುಕ್ ನಲ್ಲಿ ನಟಿ ಅದ್ಭುತವಾಗಿ ಕಾಣಿಸುತ್ತಿದ್ದರು ಎಂದು ನೆಟ್ಟಿದರು ಕಾಮೆಂಟ್ ಮಾಡಿದ್ದಾರೆ.