ಮಿಲ್ಕಿ ಬ್ಯೂಟಿ ತಮನ್ನಾಗೆ ಕೂಡಿಬಂತಾ ಕಂಕಣ ಭಾಗ್ಯ? ಹರಿಶಿನ ಶಾಸ್ತ್ರದ ಫೋಟೋಸ್‌ ಫುಲ್‌ ವೈರಲ್‌!!

Thu, 17 Oct 2024-3:06 pm,

Tamannaah Bhatia haldi ceremony photos: ಸೌತ್‌ ಬ್ಯೂಟಿ ತಮನ್ನಾ ತಮ್ಮ ಸೌಂದರ್ಯದಿಂದ ಸಿನಿಮಾ ರಂಗವನ್ನು ಆಳುತ್ತಿರುವ ನಟಿ, ಈ ನಟಿಯ ಬ್ಯೂಟಿಗೆ ಪಡ್ಡೆ ಹುಡುಗರು ಮನಸೋಲುತ್ತಾರೆ, ಆದರೆ ಇದೀಗ ಹರಿಶಿನ ಶಾಸ್ತ್ರ ಮಾಡಿಕೊಳ್ಳುವ ನಟಿ ತಮ್ಮ ಅಭಿಮನಿಗಳಿಗೆ ಶಾಕ್‌ ಕೊಟ್ಟಿದ್ದಾರೆ.  

ಹೌದು, ನಟಿ ತಮನ್ನಾ ಭಾಟಿಯಾ ಅವರ ಹರಿಶಿನ ಶಾಸ್ತ್ರದ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.  

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೋಗಳಲ್ಲಿ ನಟಿ ಹರಿಶಿನ ಸೀರೆಯನ್ನುಟ್ಟು, ಮೈ ತುಂಬಾ ಒಡವೆ ಧರಿಸಿ ಹಚ್ಚ ಸೌತ್‌ ಇಂಡಿಯನ್‌ ವಧುವಿನಂತೆ ಕಾಣುತ್ತಿದ್ದಾರೆ.   

ಈ ಫೋಟೋಗಳು ಹರಿಶಿನ ಶಾಸ್ತ್ರದ ಸಂದರ್ಭದ್ದಾಗಿದ್ದು, ಈ ಫೋಟೋಗಳನ್ನು ನೋಡಿ ಅಭಿಮಾನಿಗಲು ಶಾಕ್‌ ಆಗಿದ್ದಾರೆ.  

ಆದರೆ, ಅಸಲಿ ವಿಚಾರ ಏನು ಅಂದರೆ, ಈ ಫೋಟೋಗಳು ಅವರು ಆಭರಣ ಜಾಹಿರಾತಿಗಾಗಿ ಮಾಡಿದ್ದು. ಈ ಜಾಹಿರಾತಿನಲ್ಲಿ ನಟಿ ವಧುವಿನಂತೆ ಕಾಣಿಸಿಕೊಂಡಿದ್ದಾರೆ.  

ಈ ಫೋಟೋಗಳನ್ನು ನೋಡಿದ ಹಲವರು, ನಟಿ ಯಾಕೆ ಏಕಾಏಕಿ ಯಾಕೆ ಯಾರಿಗೂ ಹೇಳದೆ ಮದುವೆಯಾಗುತ್ತಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಸದ್ಯ ಈ ಫೋಟೋಗಳು ಜಾಹಿರಾತಿನದ್ದು ಎಂದು ತಿಳಿದ ಮೇಲೆ ಅಭಿಮಾನಿಗಳು ನೆಟ್ಟುಸಿರು ಬಿಟ್ಟಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link