ಹುಣಸೆ ಇದ್ದರೆ ಸಾಕು… ಕೇವಲ 10 ನಿಮಿಷದಲ್ಲಿ ಬಿಳಿಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು!
ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದರಿಂದ ಅನೇಕರು ಮುಜುಗರ ಎದುರಿಸಬೇಕಾಗುತ್ತದೆ. ಇನ್ನು ಕೆಲ ಜನರು ಕೂದಲು ಬಿಳಿಯಾಯಿತೆಂದು ಗೋರಂಟಿ ಹಚ್ಚಲು ಪ್ರಾರಂಭಿಸುತ್ತಾರೆ. ಆದರೆ ಈ ವಿಧಾನವು ಶಾಶ್ವತವಲ್ಲ.
ನೈಸರ್ಗಿಕ ವಿಧಾನಗಳು ಬಿಳಿ ಕೂದಲನ್ನು ಕಪ್ಪಾಗಿಸಲು ಬಹಳ ಪರಿಣಾಮಕಾರಿ. ಯಾವುದೇ ಅಡ್ಡ ಪರಿಣಾಮವಿಲ್ಲದೆ, ಬೇರುಗಳಿಂದ ಕೂದಲನ್ನು ಕಪ್ಪಾಗಿಸಲು ಅಂತಹ ವಿಧಾನಗಳು ಸಹಾಯ ಮಾಡುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಹುಣಸೆ ಎಲೆಗಳು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ಹುಣಸೆ ಎಲೆಗಳನ್ನು ಬಳಕೆ ಮಾಡಬಹುದು.
ನೈಸರ್ಗಿಕವಾಗಿ ಕೂದಲಿಗೆ ಬಣ್ಣ ನೀಡುವ ಅಂಶಗಳು ಹುಣಸೆ ಎಲೆಗಳಲ್ಲಿ ಕಂಡುಬರುತ್ತವೆ. ಕೆಲವು ದಿನಗಳವರೆಗೆ ನಿಯಮಿತವಾಗಿ ಬಳಸುವುದರಿಂದ, ಬಿಳಿ ಕೂದಲು ಬೇರುಗಳಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರೊಂದಿಗೆ ಕೂದಲು ಉದುರುವಿಕೆ ಮತ್ತು ಶುಷ್ಕತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಬಿಳಿ ಕೂದಲನ್ನು ಬೇರುಗಳವರೆಗೆ ಕಪ್ಪಾಗಿಸಲು ಹುಣಸೆ ಎಲೆಗಳನ್ನು ಸುಲಭವಾಗಿ ಬಳಸಬಹುದು. ಇದಕ್ಕಾಗಿ ನೀವು ಎಲೆಗಳ ಹೇರ್ ಪ್ಯಾಕ್ ಅನ್ನು ಸಹ ಮಾಡಬಹುದು..
ಹುಣಸೆ ಎಲೆಗಳ ಹೇರ್ ಪ್ಯಾಕ್ ಮಾಡಲು, ಎಲೆಗಳನ್ನು ತೆಗೆದುಕೊಂಡು ಮೊಸರಿನಿಂದ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಪೇಸ್ಟ್ ಸಿದ್ಧವಾದಾಗ ಅದನ್ನು ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ. ಒಣಗಿದ ನಂತರ, ತಲೆಯನ್ನು ಶುದ್ಧ ನೀರಿನಿಂದ ತೊಳೆಯಿರಿ.
ಹೇರ್ ಪ್ಯಾಕ್ ಬದಲಿಗೆ ಹುಣಸೆ ಎಲೆಗಳ ಸ್ಪ್ರೇ ಕೂಡ ತಯಾರಿಸಿಕೊಳ್ಳಬಹುದು. ಇದು ತುಂಬಾ ಸುಲಭ. ಒಂದು ಪಾತ್ರೆಯಲ್ಲಿ ಐದು ಕಪ್ ನೀರು ತೆಗೆದುಕೊಳ್ಳಿ. ಅದರಲ್ಲಿ ಅರ್ಧ ಕಪ್ ಹುಣಸೆ ಎಲೆಗಳನ್ನು ಸೇರಿಸಿ. ಈಗ ಎರಡನ್ನೂ ಚೆನ್ನಾಗಿ ಕುದಿಸಿ. ನಂತರ ಅದು ತಣ್ಣಗಾಗುವವರೆಗೆ ಇರಿಸಿ. ಬಳಿಕ ಕೂದಲಿಗೆ ಸ್ಪ್ರೇ ಮಾಡಿ, 10 ನಿಮಿಷಗಳ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.
(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. Zee Kannada News ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)