ಬಿಳಿ ಕೂದಲಿನಿಂದ ಅಂದ ಹಾಳಾಗಿದ್ಯಾ? ಈ ಹುಳಿ ಹಣ್ಣಿನ ಗಿಡದ ಎಲೆ ಬಳಸಿ ಕಪ್ಪು ದಪ್ಪ ಕೂದಲು ನಿಮ್ಮದಾಗುವುದು!
ಬಿಳಿ ಕೂದಲನ್ನು ಕಪ್ಪಾಗಿಸಲು ನೈಸರ್ಗಿಕ ವಸ್ತುಗಳನ್ನು ಬಳಸುವುದು ಉತ್ತಮ ಪರಿಹಾರವಾಗಿದೆ. ಅವುಗಳಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಹಸಿರು ಹುಣಸೆ ಎಲೆಗಳು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹುಣಸೆ ಎಲೆಗಳನ್ನು ಹೇಗೆ ಬಳಸುವುದು ಮತ್ತು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಹುಣಸೆ ಎಲೆಗಳನ್ನು ಕೆಲವು ದಿನಗಳವರೆಗೆ ನಿಯಮಿತವಾಗಿ ಬಳಸಿದರೆ ಬಿಳಿ ಕೂದಲು ಬೇರುಗಳಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರೊಂದಿಗೆ ಕೂದಲು ಉದುರುವಿಕೆ ಮತ್ತು ಶುಷ್ಕತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದು ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಹುಣಸೆ ಎಲೆಗಳನ್ನು ಬಳಸಬಹುದು. ಇದಕ್ಕಾಗಿ ನೀವು ಎಲೆಗಳ ಹೇರ್ ಪ್ಯಾಕ್ ಅನ್ನು ಸಹ ಮಾಡಬಹುದು ಅಥವಾ ಸ್ಪ್ರೇ ಮಾಡಿ ಬಳಸಬಹುದು.
ಹುಣಸೆ ಎಲೆಗಳ ಹೇರ್ ಪ್ಯಾಕ್ ಮಾಡಲು ಎಲೆಗಳನ್ನು ತೆಗೆದುಕೊಂಡು ಮೊಸರಿನ ಜೊತೆ ಚೆನ್ನಾಗಿ ರುಬ್ಬಿಕೊಳ್ಳಿ. ಹುಣಸೆ ಎಲೆಗಳ ಪೇಸ್ಟ್ ಸಿದ್ಧವಾಗಿದೆ. ಇದನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಅದು ಒಣಗಿದ ನಂತರ, ಶುದ್ಧ ನೀರಿನಿಂದ ತೊಳೆಯಿರಿ.
ಹುಣಸೆ ಎಲೆಗಳ ಸ್ಪ್ರೇ ಮಾಡುವುದು ತುಂಬಾ ಸುಲಭ. ಒಂದು ಪಾತ್ರೆಯಲ್ಲಿ ಐದು ಕಪ್ ನೀರು, ಅರ್ಧ ಕಪ್ ಹುಣಸೆ ಎಲೆ ಹಾಕಿ ಕುದಿಸಿ. ನಂತರ ಅದು ತಣ್ಣಗಾಗುವವರೆಗೆ ಬಿಡಿ. ಬಳಿಕ ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೂದಲಿಗೆ ಸಿಂಪಡಿಸಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. 20 ನಿಮಿಷಗಳ ನಂತರಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.
ಸೂಚನೆ: ನಮ್ಮ ಲೇಖನವು ಮಾಹಿತಿಯನ್ನು ಒದಗಿಸಲು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.