ಹುಣಸೆ ಬೀಜ ವೇಸ್ಟ್ ಅಲ್ಲ.. ಮುಖದ ಮೇಲಿನ ಕಪ್ಪು ಕಲೆಗಳಿಗೆ ಇದೊಂದೇ ರಾಮಬಾಣ!
ಕಪ್ಪು ವರ್ಣದ್ರವ್ಯದ ಅತಿಯಾದ ಉತ್ಪಾದನೆಯಿಂದ ಚರ್ಮದ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ. ಇದಕ್ಕಾಗಿ ಕಪ್ಪು ಕಲೆಗಳ ಸಮಸ್ಯೆಯಿಂದ ಬಳಲುತ್ತಿರುವವರು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳನ್ನೇ ಬಳಸಬೇಕಿಲ್ಲ. ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು.
ಪ್ರತಿದಿನ ಅಡುಗೆಯಲ್ಲಿ ಬಳಸುವ ಹುಣಸೆ ಹಣ್ಣಿನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹುಣಸೆ ಬೀಜಗಳು ಸೌಂದರ್ಯ ವೃದ್ಧಿಗೆ ತುಂಬಾ ಪ್ರಯೋಜನಕಾರಿ.
ಹುಣಸೆ ಬೀಜಗಳನ್ನು ಬಳಸುವುದರಿಂದ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ಹುಣಸೆ ಬೀಜಗಳನ್ನು ಒಣಗಿಸಿ, ಪುಡಿ ಮಾಡಿ. ಇದನ್ನು ಜೇನುತುಪ್ಪದೊಂದಿಗೆ ಬೆರೆಸಿ ಕಪ್ಪು ಕಲೆಗಳ ಮೇಲೆ ಹಚ್ಚಿ.
ಹುಣಸೆ ಬೀಜದ ಫೇಸ್ ಮಾಸ್ಕ್ ಟೈರೋಸೋನೇಸ್ ಕಿಣ್ವದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ಮೆಲನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಕಪ್ಪು ಕಲೆಗಳು ಕ್ರಮೇಣ ಕಡಿಮೆಯಾಗುತ್ತವೆ.
ಹುಣಸೆ ಬೀಜಗಳನ್ನು ಬಳಸುವುದರಿಂದ ಚರ್ಮದ ಕೋಶಗಳಲ್ಲಿನ ಉರಿಯೂತ ಸಹ ಕಡಿಮೆ ಆಗುತ್ತದೆ. 2012 ರಲ್ಲಿ ಥಾಯ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಹುಣಸೆ ಬೀಜಗಳು ಕಪ್ಪು ಕಲೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.