ಖ್ಯಾತ ನಟ ಅಜಿತ್ ಮನೆ ಕೆಡವಿದ ಸರ್ಕಾರಿ ಅಧಿಕಾರಿಗಳು..? ಕಾರಣ ಏನ್‌ ಗೊತ್ತೆ..?

Mon, 23 Oct 2023-6:00 pm,

ಅಜಿತ್‌ ಕುಮಾರ್‌ ಟಾಲಿವುಡ್‌ ಚಿತ್ರರಂಗದ ಖ್ಯಾತ ನಟ, ಯಾವುದೇ ಪ್ಯಾನ್‌ ಇಂಡಿಯಾ ಮೂವಿ ಮಾಡಿಲ್ಲವೆಂದರೂ ನಟ ದೇಶಾದ್ಯಂತ ಚಿರಪರಿಚಿತರಾಗಿದ್ದಾರೆ.

ಪ್ರಸ್ತುತ ಅಜಿತ್ ಅಜೆರ್ಬೈಜಾನ್‌ನಲ್ಲಿ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಮತ್ತು ರಾಜೇಶ್ ತಿರುಮೇನಿ ನಿರ್ದೇಶನದ 'ವಿಡಸಾಲಿ' ಚಿತ್ರೀಕರಣದಲ್ಲಿದ್ದಾರೆ.   

ಅಜಿತ್ ಕುಮಾರ್, ಅವರ ಪತ್ನಿ ಶಾಲಿನಿ ಮತ್ತು ಮಕ್ಕಳಾದ ಅನುಷ್ಕಾ ಮತ್ತು ಆದ್ವಿಕ್ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಈಂಚಂಬಾಕ್ಕಂನಲ್ಲಿ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ.  

ಕಳೆದ ಕೆಲವು ತಿಂಗಳಿಂದ ಈ ಭಾಗದಲ್ಲಿ ರಸ್ತೆ ಅಗಲೀಕರಣ ಹಾಗೂ ಮಳೆ ನೀರು ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿದ್ದ ಖಾಸಗಿ ಒಡೆತನದ ಕಟ್ಟಡಗಳ ಭಾಗಗಳನ್ನು ಕೆಡವಲಾಗುತ್ತಿದೆ.  

ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಇಲಾಖೆ ಈ ಕಾಮಗಾರಿಗಳನ್ನು ನಡೆಸುತ್ತಿದ್ದರೆ, ಸದ್ಯ ನಟ ಅಜಿತ್ ಕುಮಾರ್ ವಾಸವಿರುವ ಮನೆಯ ಮುಂಭಾಗದ ಗೇಟ್ ಹಾಗೂ ಸುತ್ತಲಿನ ಗೋಡೆಯನ್ನು ಕೆಡವಲಾಗಿದೆ.  

ಅಜಿತ್‌ಕುಮಾರ್ ಅವರ ಮನೆಯ ಒಂದು ಭಾಗ ಮಾತ್ರವಲ್ಲದೆ ಆ ಪ್ರದೇಶದಲ್ಲಿದ್ದ 50 ಮನೆಗಳನ್ನು ಅಧಿಕಾರಿಗಳು ನಾಲ್ಕು ಕಿಲೋಮೀಟರ್ ದೂರದವರೆಗೆ ನೆಲಸಮಗೊಳಿಸಿದ್ದಾರೆ ಎಂದು ವರದಿಯಾಗಿದೆ. 

ಕೆಲವೇ ವಾರಗಳಲ್ಲಿ ಅಜಿತ್‌ ಮನೆಯ ಹತ್ತಿರ ನಡೆಯುತ್ತಿರುವ ರಸ್ತೆ ಅಗಲೀಕರಣ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link