ಈ ಖ್ಯಾತ ನಟನೇ ಅಮೃತಧಾರೆ ಧಾರಾವಾಹಿಯ `ಭೂಮಿಕಾ` ನಿಜ ಜೀವನದ ಪತಿ!
![ಛಾಯಾ ಸಿಂಗ್ Chaya Singh Parents](https://kannada.cdn.zeenews.com/kannada/sites/default/files/2023/12/07/358092-7.jpg?im=FitAndFill=(500,286))
ಗೋಪಾಲ್ ಸಿಂಗ್, ಚಮನ್ ಲತಾ ದಂಪತಿ ಪುತ್ರಿ ಛಾಯಾ ಸಿಂಗ್, ಕನ್ನಡ , ತಮಿಳು, ಮಲಯಾಳಂ, ಬಂಗಾಳಿ ಮತ್ತು ಭೋಜ್ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
![.ಛಾಯಾ ಸಿಂಗ್ ಸಿನಿಮಾ Chaya singh films](https://kannada.cdn.zeenews.com/kannada/sites/default/files/2023/12/07/358091-6.jpg?im=FitAndFill=(500,286))
.ಛಾಯಾ ಸಿಂಗ್ ಪ್ರಧಾನವಾಗಿ ಗುರುತಿಸಿಕೊಂಡಿದ್ದು, ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ.
![ಛಾಯಾ ಸಿಂಗ್ ಧಾರಾವಾಹಿ Chaya in Serial](https://kannada.cdn.zeenews.com/kannada/sites/default/files/2023/12/07/358090-5.jpg?im=FitAndFill=(500,286))
ಇವರು ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಿಯಾಲಿಟಿ ಶೋನ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.
ನಿಜ ಜೀವನದಲ್ಲಿ ಛಾಯಾ ಅವರದ್ದು ಪ್ರೇಮ ವಿವಾಹ. ತಾನು ಮೆಚ್ಚಿದ ಹುಡುಗನ ಜೊತೆಗೆ ಮನೆ ಮಂದಿಯ ಸಮ್ಮತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
.ಛಾಯಾ ಪತಿ ತಮಿಳು ನಟ ಕೃಷ್ಣ. ತಮಿಳು ಸಿನಿಮಾದಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹುಟ್ಟಿದ ಪ್ರೀತಿ ೨೦೧೨ ರಲ್ಲಿ ದಾಂಪತ್ಯಕ್ಕೆ ತಿರುಗಿದೆ.
ಮದುವೆಯ ನಂತರವೂ ಇಬ್ಬರೂ ವೃತ್ತಿ ಜೀವನದಲ್ಲಿ ಪರಸ್ಪರರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.