ನಟಿ ಜ್ಯೋತಿಕಾ ತಂಗಿ ಕನ್ನಡದ ಜನಪ್ರಿಯ ನಟಿ! ರವಿಚಂದ್ರನ್, ಶಿವರಾಜ್ ಕುಮಾರ್ ಜೊತೆಯೂ ನಟಿಸಿದ್ದ ಈ ಅತಿಲೋಕ ಸುಂದರಿ 49 ವರ್ಷವಾದ್ರೂ ಇನ್ನೂ ಸಿಂಗಲ್ ಆಗಿದ್ದಾರೆ!
ಮಹಿಳಾ ಪ್ರಧಾನ ಸಿನಿಮಾಗಳಿಂದಲೇ ಜನಮನ್ನಣೆ ಗಳಿಸಿರುವ ನಟಿ ಜ್ಯೋತಿಕಾ ಸರವಣನ್. ಇವರು ತಮಿಳಿನ ಖ್ಯಾತ ನಟ ಸೂರ್ಯ ಅವರ ಪತ್ನಿಯೂ ಹೌದು.
ಇನ್ನು ತಮಿಳು ಸಿನಿರಂಗದಲ್ಲಿ ತನ್ನದೇ ಆದ ವಿಶೇಷ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ನಟಿ ಜ್ಯೋತಿಕಾ ಅವರ ಸಹೋದರಿಯೂ ಬಹುಭಾಷಾ ನಟಿ.
50 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜ್ಯೋತಿಕಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಫಿಲ್ಮಂಫೇರ್ ಪ್ರಶಸ್ತಿ (ಸೌತ್), ನಾಲ್ಕು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ.
ಅಂದಹಾಗೆ, ಜ್ಯೋತಿಕಾ ಅವರ ತಂದೆ ಪಂಜಾಬಿ ಹಿಂದೂ ಮತ್ತು ತಾಯಿ ಮುಸ್ಲಿಂ. ಇವರ ತಂದೆ ಚಂದರ್ ಸದನಾ, ಚಲನಚಿತ್ರ ನಿರ್ಮಾಪಕರು ಕೂಡ ಆಗಿದ್ದರು. ಇನ್ನು ತಾಯಿ ಹೆಸರು ಸೀಮಾ ಸದನಾ. ಇನ್ನು ಸೀಮಾ ಅವರಿಗೆ ಚಂದರ್ ಜೊತೆ ಇದು ಎರಡು ಮದುವೆಯಾಗಿದ್ದು, ಮತ್ತೋರ್ವ ಪತಿಯ ಮಗಳೇ ನಟಿ ನಗ್ಮಾ. ಅಂದರೆ ಜ್ಯೋತಿಕಾ ಅವರ ಸಹೋದರಿ
1990 ರ ದಶಕದಲ್ಲಿ ಜನಪ್ರಿಯ ನಾಯಕ ನಟಿಯಾಗಿದ್ದ ನಗ್ಮಾ, 1990 ರಲ್ಲಿ ಸಲ್ಮಾನ್ ಖಾನ್ ಜೊತೆ ಬಾಘಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದು ಹಿಂದಿ ಚಿತ್ರರಂಗದ ವರ್ಷದ ಏಳನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿತ್ತು.
ನಗ್ಮಾ ಹಿಂದಿ ಮಾತ್ರವಲ್ಲದೆ, ತೆಲುಗು, ಹಿಂದಿ, ತಮಿಳು ಮತ್ತು ಭೋಜ್‌ಪುರಿ ಚಲನಚಿತ್ರಗಳಲ್ಲಿಯೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಇನ್ನುಳಿದಂತೆ ಮಲಯಾಳಂ, ಕನ್ನಡ, ಬೆಂಗಾಲಿ, ಪಂಜಾಬಿ, ಮರಾಠಿ ಮುಂತಾದ ಹಲವಾರು ಪ್ರಾದೇಶಿಕ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.