ಗರ್ಭಿಣಿ ಮಹಿಳೆಯರೇ ಸಿಹಿಸುದ್ದಿ: ಗರ್ಭಧರಿಸಿದ ಪ್ರತಿಯೊಬ್ಬ ತಾಯಂದಿರ ಖಾತೆ ಸೇರಲಿದೆ 18 ಸಾವಿರ ರೂ... ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

Wed, 27 Nov 2024-4:23 pm,

ಗರ್ಭಿಣಿಯರು ಮತ್ತು ನವಜಾತ ಶಿಶುವಿನ ಪೋಷಣೆಗೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು, ಅಂತೆಯೇ ಹೆರಿಗೆಯ ಸಮಯದಲ್ಲಿ ಸಾವುಗಳನ್ನು ತಡೆಗಟ್ಟಲು ಡಾ.ಮುತ್ತುಲಕ್ಷ್ಮಿ ರೆಡ್ಡಿ ಮಾತೃತ್ವ ಆರ್ಥಿಕ ಸಹಾಯ ಯೋಜನೆಯನ್ನು ಪರಿಚಯಿಸಲಾಯಿತು. ಇದು, ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ತುಂಬಾ ಸಹಾಯ ಮಾಡುತ್ತದೆ.

ಬಡತನ ರೇಖೆಗಿಂತ ಕೆಳಗಿರುವ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ತರುವಲ್ಲಿ ತಮಿಳುನಾಡು ಯಾವಾಗಲೂ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಆ ಮೂಲಕ ಗರ್ಭಿಣಿಯರಿಗೆ ಹೆರಿಗೆ ಅವಧಿಯಲ್ಲಿ ಆಗುವ ಆದಾಯದ ನಷ್ಟವನ್ನು ಸರಿದೂಗಿಸಲು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಡಾ.ಮುತ್ತುಲಕ್ಷ್ಮಿ ರೆಡ್ಡಿ ಮಾತೃತ್ವ ಸವಲತ್ತು ಯೋಜನೆಯನ್ನು 2006 ರಿಂದ ಜಾರಿಗೊಳಿಸಲಾಗಿದೆ.

 

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಿಂದ ಅನುದಾನಿತವಾಗಿರುವ ಈ ಯೋಜನೆಯು ಈ ವರ್ಷ ಏಪ್ರಿಲ್ 1 ರಿಂದ ಕೆಲವು ಬದಲಾವಣೆಗಳಿಗೆ ಒಳಗಾಗಿದೆ.

 

ಇದಕ್ಕೂ ಮುನ್ನ ಗರ್ಭಿಣಿಯರಿಗೆ 5 ಕಂತುಗಳಲ್ಲಿ ರೂ.14 ಸಾವಿರ ಧನಸಹಾಯ ನೀಡಲಾಗಿದ್ದು, ಕಳೆದ ಏ. 1ರಿಂದ ಮೂರು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಘೋಷಿಸಿದ್ದಾರೆ.

 

ಇದರಡಿ ಗರ್ಭ ಧರಿಸಿದ 4ನೇ ತಿಂಗಳಲ್ಲಿ 6 ಸಾವಿರ ರೂ. ಮುಂದೆ ಮಗು ಹುಟ್ಟಿದ 4ನೇ ತಿಂಗಳಲ್ಲಿ 6 ಸಾವಿರ ನೀಡಲಾಗುತ್ತದೆ. ಮಗು ಜನಿಸಿದ 9ನೇ ತಿಂಗಳಲ್ಲಿ ಮೂರು ಕಂತುಗಳಲ್ಲಿ 2 ಸಾವಿರ ನೀಡಲಾಗುತ್ತದೆ. ಹೀಗಾಗಿ ಒಟ್ಟು 14 ಸಾವಿರ ರೂ. ಖಾತೆ ಸೇರಲಿದೆ

 

ತಮಿಳುನಾಡು ಸರ್ಕಾರದ ಪೌಷ್ಠಿಕ ನಿಧಿಯನ್ನು ನಗದು ರೂಪದಲ್ಲಿ ನೀಡುವುದರ ಜೊತೆಗೆ ಗರ್ಭಿಣಿಯಾದ 3 ಮತ್ತು 6ನೇ ತಿಂಗಳಲ್ಲಿ ತಲಾ 2 ಸಾವಿರ ರೂ. ನೀಡಲಾಗುತ್ತದೆ. ಈ ಮೂಲಕ ಈ ಯೋಜನೆಯಡಿ ಗರ್ಭಿಣಿ ಮಹಿಳೆಗೆ ಒಟ್ಟು 18 ಸಾವಿರ ರೂ. ಲಭಿಸುತ್ತದೆ.

 

ಮಹಿಳೆಯರು ಗರ್ಭಿಣಿಯಾದ 12 ವಾರದೊಳಗೆ ಗ್ರಾಮೀಣ ಮತ್ತು ನಗರ ಆರೋಗ್ಯ ಕೇಂದ್ರದ ಶುಶ್ರೂಷಕರಲ್ಲಿ ಆಧಾರ್ ಕಾರ್ಡ್ ತೋರಿಸಿ ಆರ್‌ಸಿಎಚ್ ಸಂಖ್ಯೆ ಪಡೆಯಬೇಕು. ಇಲ್ಲದಿದ್ದರೆ, ಬುಕಿಂಗ್ ಅನ್ನು ಕನಿಷ್ಠ 12 ವಾರಗಳಲ್ಲಿ ಮಾಡಬೇಕು.

 

ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಗರ್ಭಿಣಿಯರು ಮಾತ್ರ ಈ ಯೋಜನೆಯನ್ನು ಪಡೆಯಬಹುದು. ಗರ್ಭಿಣಿ ಮಹಿಳೆಗೆ ಕಡ್ಡಾಯ 19 ವರ್ಷ ವಯಸ್ಸಾಗಿರಬೇಕು. ಮೊದಲ ಎರಡು ಹೆರಿಗೆಗೆ ಮಾತ್ರ ಹಣಕಾಸಿನ ನೆರವು ನೀಡಲಾಗುತ್ತದೆ. ನಂತರದ ಹೆರಿಗೆಗೆ ಷರತ್ತಿನ ಹೆಸರಿನಲ್ಲಿ ಆರ್ಥಿಕ ನೆರವು ನೀಡಲಾಗುವುದು ಎಂಬ ಮಾಹಿತಿಯೂ ಲಭ್ಯವಾಗಿದೆ. ಇದಕ್ಕಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ದಾದಿಯರನ್ನು ಸಂಪರ್ಕಿಸಿ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link