ಮಕರ ಸಂಕಾಂತ್ರಿಗೆ ಪ್ರತಿ ಕುಟುಂಬಕ್ಕೆ ಗಿಫ್ಟ್ ಪ್ಯಾಕೇಜ್ ಜೊತೆಗೆ ಮಹಿಳೆಯರಿಗೆ ಪಟ್ಟೆ ಸೀರೆ ಘೋಷಿಸಿದ ಸರ್ಕಾರ !ಇಂದಿನಿಂದಲೇ ಆರಂಭವಾಗಿದೆ ವಿತರಣೆ
ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸುಗ್ಗಿ ಹಬ್ಬಕ್ಕಾಗಿ ತಯಾರಿ ಸಂಭ್ರಮ ಸಡಗರದಿಂದ ನಡೆಯುತ್ತಿದೆ.
ಈ ಹಬ್ಬವನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಮಕರ ಸಂಕ್ರಾಂತಿ, ಪೊಂಗಲ್, ಬಿಹು ಹೀಗೆ ಅನೇಕ ಹೆಸರುಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ತಮಿಳುನಾಡು ಸರ್ಕಾರ ಪ್ರತಿ ವರ್ಷ ಪೊಂಗಲ್ ಉಡುಗೊರೆ ಪ್ಯಾಕೇಜ್ ಮತ್ತು ಒಂದು ಸಾವಿರ ರೂಪಾಯಿ ನಗದನ್ನು ನೀಡುತ್ತಾ ಬಂದಿದೆ. ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಈ ಪರಂಪರೆ ಮುದುವರೆದಿದೆ.
ಆದರೆ ಈ ವರ್ಷ ಪೊಂಗಲ್ ಬಹುಮಾನ ಘೋಷಿಸಿದ ತಮಿಳುನಾಡು ಸರ್ಕಾರ ಪೊಂಗಲ್ ಉಡುಗೊರೆ ಪ್ಯಾಕೇಜ್ ಅನ್ನು ಅಕ್ಕಿ ಪಡಿತರ ಚೀಟಿದಾರರಿಗೆ ಮಾತ್ರ ನೀಡುತ್ತಿದೆ. ಇದಕ್ಕಾಗಿ ಟೋಕನ್ ವಿತರಣೆ ಕೂಡಾ ನಡೆದಿದೆ.
ಜನವರಿ 9 ಅಂದರೆ ಇಂದಿನಿಂದ ಪಡಿತರ ಚೀಟಿದಾರರಿಗೆ ಪೊಂಗಲ್ ಉಡುಗೊರೆ ವಿತರಣೆ ಆರಂಭವಾಗಲಿದೆ.ಈ ಪೊಂಗಲ್ ಉಡುಗೊರೆ ಸೆಟ್‌ನಲ್ಲಿ ಒಂದು ಕೆಜಿ ಅಕ್ಕಿ, ಕಬ್ಬು ಮತ್ತು ಸಕ್ಕರೆಯನ್ನು ನೀಡಲಾಗುತ್ತದೆ. ಉಚಿತ ಪಟ್ಟೆ ಸೀರೆಯನ್ನೂ ನೀಡಲಾಗುವುದು.
ಹಣಕಾಸು ಸಚಿವ ತಂಗಂ ತೆನ್ನರಸು ಅವರ ಪ್ರಕಾರ, ತಮಿಳುನಾಡು ಇತ್ತೀಚೆಗೆ ಭಾರಿ ಅನಾಹುತಗಳನ್ನು ಎದುರಿಸುತ್ತಿದೆ. ಆ ಅನಾಹುತಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಯಾವುದೇ ಹಣವನ್ನು ನೀಡಲಿಲ್ಲ. ಹೀಗಾಗಿ ಈ ವರ್ಷ ಪೊಂಗಲ್ ಉಡುಗೊರೆ ಪ್ಯಾಕೇಜ್‌ನಲ್ಲಿ ಒಂದು ಸಾವಿರ ರೂಪಾಯಿ ನಗದು ಸೇರಿಲ್ಲ.