Tamannaah Bhatia: ಬ್ಲಾಕ್‌ ಆಂಡ್‌ ವೈಟ್‌ ಸಿಂಪಲ್‌ ಡಿಸೈನರ್‌ ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ

Mon, 30 Oct 2023-5:43 pm,

 ಸೌತ್‌ ಆಕ್ಟ್ರೆಸ್‌ ತಮನ್ನಾ ಭಟಿಯಾ ಇತ್ತೀಚಿಗೆ ಸೋಷಿಯಲ್‌ ಮಿಡಿಯಾ ಹೆಚ್ಚು ಆಕ್ಟೀವ್‌ ಆಗಿದ್ದು, ಪ್ರತಿ ನಿತ್ಯ ತಮ್ಮ ಹೊಸ ಪೋಟೋಸ್‌ ಹಾಗೂ ವಿಡಿಯೋ ಶೇರ್‌ ಮಾಡುತ್ತಾ ಫ್ಯಾನ್ಸ್‌ ಆಂಡ್‌ ಫಾಲೋವರ್ಸ್‌ ಜೊತೆ ಇಂಟರಾಕ್ಟೀವ್‌ ಆಗಿದ್ದಾರೆ.  

ಮಿಲ್ಕಿ ಬ್ಯೂಟಿ ಹೊಸ ಫೋಟೋ ಶೂಟ್‌ ಮಾಡಿಸಿ ತಮ್ಮ ಫ್ಯಾನ್ಸ್‌ ಜೊತೆಗೆ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಈ ನಟಿ ಕಪ್ಪು ಬೀಟ್ಸ್‌ನ ಸ್ಲಿವ್ಲೆಸ್‌ ಬ್ಲೌಸ್‌ ಹಾಗೂ ಬ್ಲಾಕ್‌ ಪ್ರಿಂಟ್‌ ಆಂಡ್‌ ಬೀಟ್ಸ್‌ನ ಸ್ಯಾರಿ ಧರಿಸಿದ್ದಾರೆ.ಕೊರಳಿಗೆ ಬ್ಲಾಕ್‌ ಮೆಟಲ್‌ ನೆಕ್ಲೇಸ್‌ ಹಾಗೂ ಬಲಗೈ ಬೆರಳಿಗೆ ಕಪ್ಪು ರಿಂಗ್‌ ಧರಿಸಿ, ಫ್ರೀ ಹೇರ್ಸ್‌ನಲ್ಲಿ ಫೋಟೋಗೆ ಡಿಫರೆಂಟ್‌ ಡಿಫರೆಂಟ್‌ ಪೋಸ್‌ಗಳನ್ನು ನೀಡಿದ್ದಾರೆ.  

ನಟಿ ತಮನ್ನಾ ತಮ್ಮ ಹೊಸ ಫೋಟೋಗಳ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುವುದರ ಜೊತೆಗೆ ʼನಾಟ್‌ ಸೋರಿ ಫಾರ್‌ ಅನದರ್‌ ಸ್ಯಾರಿʼ ಅಂತ ಕ್ಯಾಪ್ಷನ್ನನ್ನು ಬರೆದುಕೊಂಡಿದ್ದಾರೆ. ಆ ಫೋಟೋಗಳಿಗೆ ಐದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.  

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿದ್ದಾರೆ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿ ತಮನ್ನಾ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ನಟಿ ತಮನ್ನಾ ಸದ್ಯ ʼಆಖ್ರೀ ಸಚ್‌ʼ ಎಂಬ ಇನ್ವೇಸ್ಟೀಗೇಟೀಗ್‌ ಡ್ರಾಮಾ ಸೀರೀಸ್‌ನಲ್ಲಿ ಅನ್ಯಾ ಪಾತ್ರ ಮಾಡ್ತಾಯಿದದ್ದು ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಬಿಸಿಯಾಗಿದ್ದಾರೆ. ಇನ್ನೋಂದು ಕಡೆ ಮಿಲ್ಕಿ ಬ್ಯೂಟಿ ತಮನ್ನಾ ಸದ್ಯ ʼಬಾಂದ್ರಾʼ ಸಿನಿಮಾ ಮೂಲಕ ಮಾಲಿವುಡ್‌ಗೆ ಹೆಜ್ಜೆಯಿಡುತ್ತಿದ್ದು, ನಾಯಕ ದಿಲೀಪ್‌ ಜೊತೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.   

ಇತ್ತೀಚೆಗೆ ನಟಿ ತಮನ್ನಾ ಐಐಎಫ್‌ಎಲ್‌ ಫೈನ್ಯಾನ್ಸ್‌, ವಿಎಲ್‌ಸಿಸಿ ಹಾಗೂ ಜಪಾನ್‌ನ ಶಿಸೆಡೋ ಕಂಪನಿಯ ಬ್ರಾಂಡ್ ಅಂಬ್ಯಾಸಿಡರ್‌ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link