ನನ್ನ ಎಜುಕೇಷನ್‌ ಏನಾಗಿದೆ ಗೊತ್ತಾ.. ಎಂದು ಕಿರುಚಾಡಿದ ತನಿಷಾ ಕುಪ್ಪಂಡ ನಿಜವಾದ ವಿದ್ಯಾರ್ಹತೆ ಏನು?

Thu, 09 Nov 2023-9:23 am,

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ತನಿಷಾ ಕುಪ್ಪಂಡ ಎಲ್ಲರ ಗಮನ ಸೆಳೆದಿದ್ದಾರೆ. ತನಿಷಾ ಕುಪ್ಪಂಡ ಟಾಸ್ಕ್‌ ಆಡುವ ರೀತಿಗೆ ಹಲವರು ಫಿದಾ ಆಗಿದ್ದಾರೆ. 

ನಿನ್ನೆ ನಡೆದ ಟಾಸ್ಕ್‌ನಲ್ಲಿ ಆಟಕ್ಕಿಂತ ಹೆಚ್ಚಾಗಿ ವೈಯಕ್ತಿಕ ತೇಜೋವಧೆ ನಡೆದಿದೆ ಎಂದರೆ ತಪ್ಪಾಗಲಾರದು. 

ಟಾಸ್ಕ್‌ ವೇಳೆ ತನಿಷಾ ಅವರ ಪರ್ಸನಲ್‌ ವಿಚಾರಗಳ ಬಗ್ಗೆ ಸ್ನೇಹಿತ್‌ ಹಾಗೂ ನಮ್ರತಾ ಮಾತನಾಡಿದ್ದಾರೆ. 

ಇದು ತನಿಷಾ ಕುಪ್ಪಂಡ ಅವರ ಮನಸ್ಸಿಗೆ ನೋವು ತಂದಿದೆ. ಇದರಿಂದ ಆಕ್ರೋಶಗೊಂಡ ತನಿಷಾ ನನ್ನ ಎಜುಕೇಷನ್‌ ಏನಾಗಿದೆ ಎಂದು ನಿಮಗೆ ಗೊತ್ತಾ? ಮತ್ಯಾಕೆ ಮಾತನಾಡಿದ್ರಿ ಎಂದು ಕೋಪಗೊಂಡಿದ್ದಾರೆ.

ನಾನೇನು ಓದಿದ್ದೀನಿ ಅಂತ ಗೊತ್ತಾ ನಿಮಗೆ? ಎಂದು ನಮ್ರತಾ, ಸ್ನೇಹಿತ್‌ ವಿರುದ್ಧ ಆಕ್ರೋಶ ಹೊರಹಾಕಿದ ತನಿಷಾ ನಿಜವಾದ ವಿದ್ಯಾರ್ಹತೆ ಏನು ಎಂಬುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. 

ಮಂಗಳ ಗೌರಿ ಮದುವೆ ಸೀರಿಯಲ್‌ ಮೂಲಕ ಜನರಿಗೆ ಚಿರ ಪರಿಚಿತರಾಗಿರುವ ತನಿಷಾ ಅವರು ಬಿಬಿಎಂ (BBM) ಪದಿವಿಧರೆ ಎನ್ನಲಾಗ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link