ಹುಟ್ಟುಹಬ್ಬದಂದೇ ದಾಂಪತ್ಯಕ್ಕೆ ಕಾಲಿಡುತ್ತಿರುವ ಸೋನಾಲ್‌ ಮಂಥರೋ: ಮದ್ದು ಸೊಸೆಗೆ ದೃಷ್ಟಿ ತೆಗೆದ ಸುಧೀರ್‌ ತಾಯಿ..!

Sun, 11 Aug 2024-10:31 am,

 ಸ್ಯಾಂಡಲ್‌ವುಡ್‌ ನಟಿ ಸೋನಾಲ್‌ ಹಾಗೂ ತರುಣ್‌ ಸುಧೀರ್‌ ಜೋಡಿ ಇಂದು(ಆಗಸ್ಟ್‌ 11)ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಪ್ರತಿ ವರ್ಷ ಸಿಂಗಲ್‌ ಆಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಸೋನಾಲ್‌ ಈ ಭಾರಿ ತಮ್ಮ ಪತಿ ಸುದೀರ್‌ಹೋಂದಿಗೆ ಹಸೆಮಣೆ ಏರಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ಆಗಸ್ಟ್‌ 10ರ ಶನಿವಾರ ಸೋನಾಲ್‌ ಹಾಗೂ ಸುಧೀರ್‌ ಅವರ ಮದುವೆ ಆರತಾಕ್ಷತೆ ಕಾರ್ಯಕ್ರಮ ನೆರವೇರಿದೆ. ಇನ್ನೂ ಇಂದು(ಆಗಸ್ಟ್‌ 11) Bಅನುವಾರ ಈ ಜೋಡಿ ಬೆಳಗ್ಗೆ 10 ರ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿಯಲಿದ್ದಾರೆ.  

ಶನಿವಾರ ನಡೆದ ಆರತಾಕ್ಷತೆಯಲ್ಲಿ ಸೋನಾಲ್‌ ಕ್ರೀಮ್‌ ಕಲರ್‌ ಲೆಹಂಗಾ ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಸ್ಟೇಜ್‌ ಮೇಲೆ ನಿಂತಿದ್ದ ತರುಣ್‌ ಸುಧೀರ್‌ ತಾಯಿ ಮಾಲತಿ ಸುಧೀರ್‌ ತಮ್ಮ ಸೊಸೆ ಸೋನಾಲ್‌ಗೆ ಸೀರೆಯ ಸೆರಗಿನಿಂದ ದೃಷ್ಟಿ ತೆಗೆದು ಎಲ್ಲರ ಗಮನ ಸೆಳೆದರು.  

ತಮ್ಮ ಮುದ್ದಿನ ಸೊಸೆಗೆ ಮಾಲತಿ ಸುಧೀರ್‌ ದೃಷ್ಟಿ ತೆಗೆದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಈಗ ಸಿಕ್ಕಾಪಟ್ಟೆ ವೃರಲ್‌ ಆಗುತ್ತಿದೆ.  

ಇನ್ನೂ, ತರುಣ್‌ ಸೋನಾಲ್‌ ಆರತಾಕ್ಷತೆಗೆ ಮಾಜಿ ಸಿ.ಎಂ. ಬಿ.ಎಸ್‌ ಯಡಿಯೂರಪ್ಪ ಅಷ್ಟೆ ಅಲ್ಲದೆ ಸ್ಯಾಂಡಲ್‌ವುಡ್‌ನ ಗಣ್ಯ ವ್ಯಕ್ತಿಗಳು ಹಾಜರಾಗಿ ನವ ಜೋಡಿಗೆ ಶುಭ ಹಾರೈಸಿದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link