ತರುಣ್ ಸುಧೀರ್-ಸೋನಾಲ್ ಅದ್ದೂರಿ ಮದುವೆ ಸಂಭ್ರಮ..! ಇಂದು ಪ್ರೇಮ ಜೋಡಿ ದಾಂಪತ್ಯಕ್ಕೆ ಕಾಲಿಡುವ ದಿನ
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಇಂದು ತಮ್ಮ ದಾಂಪತ್ಯ ಜೀವನ್ಕೆ ಕಾಲಿಡಲಿದ್ದಾರೆ. ಹಲವು ದಿನಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದು ಇಂದು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.
ತರುಣ್ ಸುಧೀರ್ ಹಾಗೂ ಸೋನಾಲ್ ಅವರ ಆರತಾಕ್ಷತೆ ಕಾರ್ಯಕ್ರಮ ನಿನ್ನೆ (ಆಗಸ್ಟ್ 10) ರಂದು ನಡೆದು ಮುಗಿದಿದೆ. ಈ ಆರತಾಕ್ಷತೆ ಸಮಾರಂಭಕ್ಕೆ ಖ್ಯಾತ ಗಾಯಕ ಹಂಸಲೇಕ ಸೇರಿದಂತೆ ಸ್ಯಂಡಲ್‌ವುಡ್‌ನ ಬಹು ದೊಡ್ಡ ತಾರಾಗಣವೇ ಸಾಕ್ಷಿಯಾಗಿತ್ತು.
ತರುಣ್ ಸುಧೀರ್ ಹಾಗೂ ಸೋನಾಲ್ ಅವರು ಸ್ಯಾಂಡಲ್‌ವುಡ್‌ನ ಗಣ್ಯರಿಗೆ ಹಾಗೂ ತಮ್ಮ ಆಪ್ತರಿಗೆ ತಮ್ಮ ಮದುವೆಗೆ ಆಮಂತ್ರಣ ನೀಡಿದ್ದರು. ಈ ಮುಂಚೆ ಈ ಫೋಟೊಗಳು ಸಾಮಾಜಿಕ ಜಾಲತಾನದಲ್ಲಿ ವೈರಲ್ ಕೂಡ ಆಗಿದ್ದವು.
ನಟಿ ಸೋನಾಲ್ ಹಾಗೂ ತರುಣ್ ಸುಧೀರ್ ಮದುವೆಗೂ ಮುಂಚೆ ಫೋಟೊಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು, ಅದು ಅಷ್ಟೆ ಅಲ್ಲ ಸೋನಾಲ್ ಅವರ ಬ್ಯಾಚುಲರ್ ಪಾರ್ಟಿ ಫೋಟೋಗಳು, ಹರಿಶಿಣ ಶಾಸ್ತ್ರದ ಫೋಟೋಗಳು ಹಾಗೂ ಆರತಾಕ್ಷತಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು.
ಸೋನಾಲ್ ಹಾಗೂ ತರುಣ್ ಸುದೀರ್ ಮದುವೆ ಇಂದು (ಆಗಸ್ಟ್ 11) ನಡೆಯಲಿದೆ. ಭಾನುವಾರ 10.50 AM- 11:35 AM ರ ವೆರೆಗೆ ಮದುವೆ ನಡೆಯಲಿದ್ದು .11:35 AM ರಿಂದ ಧಾರೆ ನಡೆಯಲಿದೆ. ಇನ್ನೂ ಈ ಮದುವೆ ಸಮಾರಂಭವನ್ನು ಪೂರ್ಣಿಮಾ ಪ್ಯಾಲೆಸ್‌ನಲ್ಲಿ ನಿಶ್ಚಯ ಮಾಡಲಾಗಿದ್ದು, ಸ್ಯಂಡಲ್‌ವುಡ್‌ನ ಗಣ್ಯರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.