Relianceಗೆ ಟಕ್ಕರ್, ಇತಿಹಾಸ ಸೃಷ್ಟಿಸಿದ TATA ಕಂಪನಿ
ಮತ್ತೊಂದೆಡೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಹಿಂದಿಕ್ಕಿ ಮಾರುಕಟ್ಟೆ ಕ್ಯಾಪ್ ವಿಷಯದಲ್ಲಿ ದೇಶದ ಅತ್ಯಮೂಲ್ಯ ಕಂಪನಿಯಾಗಿ . ಹೊರಹೊಮ್ಮಿದೆ. ಟಿಸಿಎಸ್‌ನ ಮಾರುಕಟ್ಟೆ ಕ್ಯಾಪ್ ಸೋಮವಾರ 169.9 ಬಿಲಿಯನ್ ಅಥವಾ ಸುಮಾರು 12,43,540.29 ಕೋಟಿ ದಾಟಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಹಾರವು 12,42,593.78 ಕೋಟಿ ರೂ.ಗೆ ಇಳಿದಿದೆ.
ಆದಾಗ್ಯೂ ಟಿಸಿಎಸ್ನ ಈ ಸಂತೋಷವು ಸ್ವಲ್ಪ ಸಮಯದವರೆಗೆ ಮಾತ್ರ. ವ್ಯವಹಾರದ ಕೊನೆಯಲ್ಲಿ ಆರ್ಐಎಲ್ (RIL) ಮತ್ತೊಮ್ಮೆ ಮಾರುಕಟ್ಟೆ ಕ್ಯಾಪ್ ಮೂಲಕ ನಂಬರ್ -1 ತಲುಪಿತು. ಮಾರುಕಟ್ಟೆ ಮುಚ್ಚುವ ಹೊತ್ತಿಗೆ, ಟಿಸಿಎಸ್ ಮಾರುಕಟ್ಟೆ ಕ್ಯಾಪ್ 12.17 ಲಕ್ಷ ಕೋಟಿ ರೂ., ರಿಲಯನ್ಸ್ ಮಾರುಕಟ್ಟೆ ಕ್ಯಾಪ್ 12.76 ಲಕ್ಷ ಕೋಟಿ ರೂ. ಈ ಅಂತರವು ತುಂಬಾ ಕಡಿಮೆ ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ - 20 ವರ್ಷಗಳಲ್ಲಿ ಭಾರತ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ- ಮುಖೇಶ್ ಅಂಬಾನಿ
ಸೋಮವಾರ ರಿಲಯನ್ಸ್ (Reliance) ಷೇರುಗಳು ಎನ್‌ಎಸ್‌ಐನಲ್ಲಿ ಶೇ 5.58 ರಷ್ಟು ಇಳಿಕೆಯಾಗಿ 1,935 ಕ್ಕೆ ತಲುಪಿದೆ. ಟಿಸಿಎಸ್ ಷೇರುಗಳು ಶೇಕಡಾ 0.15 ರಷ್ಟು ಕುಸಿದು 3,298 ರೂ. ತಲುಪಿದೆ.
ಇದನ್ನೂ ಓದಿ - Shocking News ! ಟಾಪ್ 10 ಜಾಗತಿಕ ಶ್ರೀಮಂತರ ಪಟ್ಟಿಯಿಂದ ಕುಸಿದ ಮುಖೇಶ್ ಅಂಬಾನಿ..!
ಇದಲ್ಲದೆ ಟಾಟಾ ಗ್ರೂಪ್‌ನ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಈಗ ಹೊಸ ದಾಖಲೆ ನಿರ್ಮಿಸಿದೆ. ಟಿಸಿಎಸ್ ವಿಶ್ವದ ಅತ್ಯಂತ ಮೌಲ್ಯಯುತ ಸಾಫ್ಟ್‌ವೇರ್ ಕಂಪನಿಯಾಗಿದೆ. ಸೋಮವಾರ ಟಿಸಿಎಸ್ ವಿಶ್ವದ ಐಟಿ ದೈತ್ಯ ಅಕ್ಸೆಂಚರ್ (Accenture) ಅನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.