TATA Festive Season Offer: ತನ್ನ ಈ 4 ಜನಪ್ರೀಯ ಕಾರುಗಳ ಮೇಲೆ TATA Motors ಬಂಪರ್ ರಿಯಾಯಿತಿ ನೀಡುತ್ತಿದೆ

Wed, 06 Oct 2021-8:08 pm,

1. TATA ವತಿಯಿಂದ ಬಂಪರ್ ರಿಯಾಯಿತಿ - Diwali ಹಬ್ಬ ಆರಂಭವಾಗುವುದಕ್ಕು ಮುನ್ನವೇ  Tata Motors ತನ್ನ Nexon, Tiago, Tigor ಹಾಗೂ Harrier ನಂತಹ ಜನಪ್ರಿಯ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. ಈ ರಿಯಾಯಿತಿಗಳು Cash Discount, Exchange Bonus, Free Insurance ಮತ್ತು Extended Warrenty ರೂಪದಲ್ಲಿರುತ್ತವೆ. ಯಾವ ಟಾಟಾ ಮೋಟಾರ್  ವಾಹನಗಳ ಮೇಲೆ ಎಷ್ಟು ರಿಯಾಯಿತಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.

2. Petrol-Diesel ಎರಡೂ ಆವೃತ್ತಿಗಳ ಮೇಲೆ ಸಿಗಲಿದೆ ಲಾಭ - ಟಾಟಾ ಟಿಗೋರ್‌ನ ಪೆಟ್ರೋಲ್ ಆವೃತ್ತಿಯ ಮೇಲೆ ರೂ. 10,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 3,000 ಸಿಗುತ್ತಿದೆ. ಅಂದರೆ ಟಿಗೋರ್ ಖರೀದಿಸುವ ಗ್ರಾಹಕರು ರೂ. 28,000 ವರೆಗೆ ಒಟ್ಟು ಲಾಭವನ್ನು ಪಡೆಯಬಹುದು. ಟಾಟಾ ನೆಕ್ಸಾನ್‌ನ ಪೆಟ್ರೋಲ್ ಆವೃತ್ತಿಯ ಮೇಲೆ ಕಾರ್ಪೊರೇಟ್ ರಿಯಾಯಿತಿ 3,000 ರೂ. ಸಿಗುತ್ತಿದೆ. ಇದರ ಹೊರತಾಗಿ, ಟಾಟಾ ನೆಕ್ಸಾನ್‌ನ ಡೀಸೆಲ್ ರೂಪಾಂತರಗಳ ಮೇಲೆ ರೂ.15,000 ವಿನಿಮಯ ಬೋನಸ್ ಮತ್ತು ರೂ .5000 ಕಾರ್ಪೊರೇಟ್ ರಿಯಾಯಿತಿಯನ್ನು ಸಹ ಕಂಪನಿಯು ನೀಡುತ್ತಿದೆ.

3. Tiago ಮೇಲೆ ರೂ.28,000ವರೆಗೆ ಲಾಭ -  ಹಬ್ಬದ ಋತುವಿನಲ್ಲಿ ಟಾಟಾ ಟಿಯಾಗೊದ XE ಮತ್ತು XT (O) ವೇರಿಯಂಟ್ ಖರೀದಿದಾರರಿಗೆ ರೂ. 10,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ಮತ್ತು ರೂ. 3,000 ದ ಕಾರ್ಪೊರೇಟ್ ರಿಯಾಯಿತಿ, ಅಂದರೆ ಕಂಪನಿಯಿಂದ ಒಟ್ಟು ರೂ.28,000 ಲಾಭ ನೀಡುತ್ತಿದೆ . ಇದಲ್ಲದೇ, ರೂ. 10,000 ನಗದು ರಿಯಾಯಿತಿ, ರೂ. 10,000 ವಿನಿಮಯ ಬೋನಸ್ ಮತ್ತು ರೂ. 3,000 ಕಾರ್ಪೊರೇಟ್ ರಿಯಾಯಿತಿ ಟಾಟಾ ಟಿಯಾಗೊದ XT, XZ ಮತ್ತು XZ+ ವೇರಿಯಂಟ್ ಗಳ ಮೇಲೂ ಕೂಡ ಲಭ್ಯವಿರಲಿದೆ.

4. SUVಗಳ ಮೇಲೆ ಎಷ್ಗು ಲಾಭ - ಕಂಪನಿಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸನ್ ಇವಿ XZ+ ಮೇಲೆ  ರೂ. 10,000 ವಿನಿಮಯ ಬೋನಸ್ ಮತ್ತು ರೂ. 3,000 ಕಾರ್ಪೊರೇಟ್ ರಿಯಾಯಿತಿ ನೀಡುತ್ತಿದೆ, ಅಂದರೆ ನೆಕ್ಸಾನ್ XZ++ ಖರೀದಿದಾರರು ಒಟ್ಟು ರೂ ಕೇವಲ ರೂ.13,000 ಲಾಭ ಮಾತ್ರ ಪಡೆಯಲಿದ್ದಾರೆ. ಆದರೆ ಇನ್ನೊಂದೆಡೆ ಟಾಟಾ ನೆಕ್ಸಾನ್ ಇವಿ ಲಕ್ಸುರಿ ಆವೃತ್ತಿಯಾ ಮೇಲೆ ರೂ 15,000 ವಿನಿಮಯ ಬೋನಸ್ ಸಿಗುತ್ತಿದೆ. ಇದರ ಹೊರತಾಗಿ, ಕಂಪನಿಯು ತನ್ನ ಅತ್ಯುತ್ತಮ ಎಸ್‌ಯುವಿ ಟಾಟಾ ಹ್ಯಾರಿಯರ್‌ಗೆ ರೂ .15,000 ವಿನಿಮಯ ಬೋನಸ್ ನೀಡುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link