Tata Sky ರೀಚಾರ್ಜ್ ಆಫರ್ ನಲ್ಲಿ ಸಿಗಲಿದೆ 2 ತಿಂಗಳ Cashback

Thu, 18 Mar 2021-11:45 am,

ಟಾಟಾ ಸ್ಕೈ ರೀಚಾರ್ಜ್ ಪ್ರಸ್ತುತ ಅನೇಕ ಕೊಡುಗೆಗಳನ್ನು ಹೊಂದಿದೆ. Freecharge ಮೂಲಕ  ರೀಚಾರ್ಜ್ ಮಾಡಿದರೆ, ನೀವು 20 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು.

 ಮಾಹಿತಿಯ ಪ್ರಕಾರ, ನಿಮ್ಮ ಟಾಟಾ ಸ್ಕೈ ಸಂಪರ್ಕವನ್ನು Mobikwik ನಿಂದ ರೀಚಾರ್ಜ್ ಮಾಡಿದರೆ,ಹತ್ತು ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಕ್ಯಾಶ್‌ಬ್ಯಾಕ್‌ನ ಗರಿಷ್ಠ ಮೊತ್ತ 50 ರೂಪಾಯಿಗಳು.

ಟಾಟಾ ಸ್ಕೈ ಅಧಿಕೃತ ವೆಬ್‌ಸೈಟ್ ಪ್ರಕಾರ, ಗ್ರಾಹಕರು Lazypay ಮೂಲಕ ರೀಚಾರ್ಜ್ ಮಾಡಿದರೆ, 75 ರೂ.ಗಳ ಕ್ಯಾಶ್‌ಬ್ಯಾಕ್ ಸಿಗಲಿದೆ. 

ಇದಲ್ಲದೆ, ಟಾಟಾ ಸ್ಕೈ ಸ್ವತಃ 12 ತಿಂಗಳ ರೀಚಾರ್ಜ್‌ನಲ್ಲಿ ಒಂದು ತಿಂಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ರೀಚಾರ್ಜ್ ಮಾಡಿದ 24 ಗಂಟೆಗಳ ಒಳಗೆ ಕ್ಯಾಶ್‌ಬ್ಯಾಕ್ ನಿಮ್ಮ ಖಾತೆಗೆ ಬರುತ್ತದೆ.

ಟಾಟಾ ಸ್ಕೈ ಕ್ಯಾಶ್ ಬ್ಯಾಕ್ ನ  ಎರಡು ಆಫರ್ ಗಳನ್ನು ಹೊಂದಿದೆ.  ಇದರಲ್ಲಿ ನೀವು ಪೂರ್ಣ 2 ತಿಂಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. Bank of Baroda ಮತ್ತು  Deutsche Bank ಗ್ರಾಹಕರು ಒಂದು ವರ್ಷದ ರೀಚಾರ್ಜ್ ಮಾಡಿದರೆ, ಅವರಿಗೆ ಎರಡು ತಿಂಗಳ ಕ್ಯಾಶ್‌ಬ್ಯಾಕ್ ಸಿಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link