Tata Tigor EV ಭಾರತದಲ್ಲಿ ಬಿಡುಗಡೆ, ಫುಲ್ ಚಾರ್ಜ್ ನಲ್ಲಿ 306 ಕಿ.ಮೀ ಪಯಣಿಸಬಹುದು
1. ಅತ್ಯುತ್ತಮ ಸುರಕ್ಷತೆಯ ವೈಶಿಷ್ಟ್ಯಗಳು - ಹೊಸ ಟಾಟಾ ಟಿಗೋರ್ ಇವಿಯಲ್ಲಿ ಗ್ರಾಹಕರು ಅತ್ಯುತ್ತಮ ಸುರಕ್ಷಿತೆಯ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಇವುಗಳಲ್ಲಿ ಹಿಲ್ ಅಸೆಂಟ್, ಹಿಲ್ ಡಿಸೆಂಟ್ ಕಂಟ್ರೋಲ್, ಡ್ಯುಯಲ್ ಏರ್‌ಬ್ಯಾಗ್‌ಗಳು, CSC ಜೊತೆ ABS with EBD ಅಂದರೆ ಕಾರ್ನರಿಂಗ್ ಸ್ಟೆಬಿಲಿಟಿಯಂತಹ ವೈಶಿಷ್ಟ್ಯಗಳಿವೆ. ಇದಲ್ಲದೇ, ಕಾರಿನಲ್ಲಿ IP67 ರೇಟ್ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ಅಳವಡಿಸಲಾಗಿದೆ. ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಈಗ ದೇಶದ ಸುರಕ್ಷಿತ ಎಲೆಕ್ಟ್ರಿಕ್ ಸೆಡಾನ್ ಕಾರ್ ಆಗಿರಲಿದೆ ಎಂದು ಹೇಳಿಕೊಂಡಿದೆ. ಟಾಟಾ ಮೋಟಾರ್ಸ್ 2017 ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇಂದು ಭಾರತೀಯ ರಸ್ತೆಗಳಲ್ಲಿ 8500 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ. ಇವುಗಳಲ್ಲಿ 6000 ಕ್ಕೂ ಹೆಚ್ಚು Nexon EV ಕಾರುಗಳಿವೆ.
2. Tata Tigor EV ಫಾಸ್ಟ್ ಚಾರ್ಜರ್ - ಹೊಸ ಟಾಟಾ ಟಿಗೋರ್ ಇವಿ (New Tata Tigor EV) ವೇಗದ ಚಾರ್ಜರ್‌ನೊಂದಿಗೆ ಬರುತ್ತದೆ. ಇದರಿಂದ 1 ಗಂಟೆಯಲ್ಲಿ 0 ರಿಂದ ಶೇ. 80ರಷ್ಟು ಚಾರ್ಜ್ ಮಾಡಬಹುದು. ಇನ್ನೊಂದೆಡೆ ರೆಗ್ಯುಲರ್ ಚಾರ್ಜಿಂಗ್ ಅಥವಾ ಹೋಮ್ ಚಾರ್ಜಿಂಗ್ ನಲ್ಲಿ ನೀವು ಸುಮಾರು 8.5 ಗಂಟೆಗಳಲ್ಲಿ 0 ರಿಂದ ಶೇ. 80 ರಷ್ಟು ಚಾರ್ಜ್ ಆಗಲಿದೆ. ಈ ಕಾರನ್ನು 15A ಸಾಕೆಟ್ ಮೂಲಕ ಚಾರ್ಜ್ ಮಾಡಬಹುದು. ಇವು ನಮ್ಮ ಮನೆ ಮತ್ತು ಕಛೇರಿಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ಟಾಟಾದಿಂದ ಬರುವ ಈ ಎಲೆಕ್ಟ್ರಿಕ್ ಕಾರು 55kW ಎಲೆಕ್ಟ್ರಿಕ್ ಮೋಟಾರ್ ಮತ್ತು 26kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 74bhp (55kW)ವರೆಗೆ ಪಾವರ್ ಹಾಗೂ 170Nmವರೆಗೆ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟಾಟಾ ಮೋಟಾರ್ಸ್ ಈ ಕಾರಿನ ಮೇಲೆ 8 ವರ್ಷಗಳ ಬ್ಯಾಟರಿ ಖಾತರಿ ಮತ್ತು 1,60,000 ಕಿಮೀ ವರೆಗೆ ಬ್ಯಾಟರಿ ವಾರಂಟಿ ನೀಡುತ್ತದೆ.
3. ಇದುವರೆಗಿನ ಅತ್ಯುತ್ತಮ ಇಲೆಕ್ಟ್ರಿಕ್ ವಾಹನ - ಟಾಟಾ ಮೋಟಾರ್ಸ್ ನ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಟಾಟಾ ಟಿಗೊರ್ ನ ಎಲೆಕ್ಟ್ರಿಕ್ ಆವೃತ್ತಿಯು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 306 ಕಿ.ಮೀ. ಮೈಲೇಜ್ ನೀಡುತ್ತದೆ. ಇದು ARAI- Certified ಶ್ರೇಣಿಯ ವಾಹನವಾಗಿದೆ. ಈ ಮೈಲೇಜ್ ಇತರ ಎಲೆಕ್ಟ್ರಿಕ್ ವಾಹನಗಳಲ್ಲಿ ನಿಮಗೆ ಕಾಣಿಸುವುದಿಲ್ಲ.
4. 11.99 ಲಕ್ಷ ರೂ. ಆರಂಭಿಕ ಬೆಲೆ - ಟಾಟಾ ಮೋಟಾರ್ಸ್ ಪ್ರಕಾರ, ಹೊಸ ಟಾಟಾ ಟಿಗೋರ್ ಇವಿ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ, ಇದರಲ್ಲಿ, Tata Tigor EV XE ಬೆಲೆ 11.99 ಲಕ್ಷ ರೂ., Tata Tigor EV XM ಬೆಲೆ ರೂ. 12.49 ಲಕ್ಷ ಮತ್ತು Tata Tigor EV XZ+ ಬೆಲೆ 12.99 ಲಕ್ಷ ರೂ.ಗಳಾಗಿದೆ.
5. TATA ಕಂಪನಿಯ ಟಿಗೊರ್ EV - ನವೀಕರಿಸಿದ ಟಿಗೋರ್ ಇವಿ ಜಿಪ್ಟ್ರಾನ್ ತಂತ್ರಜ್ಞಾನದೊಂದಿಗೆ (Ziptron technology) ಬರುತ್ತದೆ. ನೆಕ್ಸಾನ್ ಇವಿ (Nexon EV) ನಂತರ ಟಾಟಾ ಮೋಟಾರ್ಸ್ ನಿಂದ ಇದು ಎರಡನೇ ಎಲೆಕ್ಟ್ರಿಕ್ ಕಾರ್ ಆಗಿದ್ದು, ಇದು ಜಿಪ್ಟ್ರಾಪ್ ತಂತ್ರಜ್ಞಾನವನ್ನು ಆಧರಿಸಿದೆ. 26 Kw ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಈ ಎಲೆಕ್ಟ್ರಿಕ್ ಕಾರು ಕೇವಲ 5.7 ಸೆಕೆಂಡುಗಳಲ್ಲಿ ಗಂಟೆಗೆ 0.60 kmph ವೇಗವನ್ನು ಪಡೆಯುತ್ತದೆ.