TATAINVEST: ಕೇವಲ 5 ವರ್ಷದಲ್ಲಿ ಹೂಡಿಕೆದಾರರಿಗೆ 11 ಸಾವಿರ ಪಟ್ಟು ಹೆಚ್ಚು ಲಾಭ ನೀಡಿದ ಟಾಟಾ ಷೇರು!

Mon, 04 Mar 2024-5:09 pm,

ಟಾಟಾ ಕಂಪನಿಯ ಹಲವಾರು ಷೇರುಗಳು ಹೂಡಿಕೆದಾರರಿಗೆ ಬಂಪರ್‌ ಲಾಭವನ್ನು ನೀಡಿವೆ. ಟಾಟಾ ಮೋಟಾರ್ಸ್‌, ಟಾಟಾ ಪವರ್‌, ಟಿಸಿಎಸ್‌, ಟಾಟಾ ಟೆಕ್ನಾಲಜಿ ಸೇರಿದಂತೆ ಹಲವಾರು ಷೇರುಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿವೆ. ಅದೇ ರೀತಿ ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರು ಸಹ ಬಂಪರ್‌ ಲಾಭ ನೀಡಿದೆ.

ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರು ಕಳೆದ ಕೇವಲ ಒಂದೇ ತಿಂಗಳಿನಲ್ಲಿ ಶೇ.52.56ರಷ್ಟು ಬಂಪರ್‌ ರಿಟರ್ನ್ಸ್‌ ನೀಡಿದೆ. ಈ ಷೇರು ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. 

ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರು ಸೋಮವಾರ(ಮಾರ್ಚ್‌ 4) ಶೇ.5ರಷ್ಟು ಏರಿಕೆ ಕಾಣುವ ಮೂಲಕ ಅಪ್ಪರ್‌ ಸರ್ಕ್ಯೂಟ್‌ನಲ್ಲಿ ವಹಿವಾಟು ಅಂತ್ಯಗೊಳಿಸಿತು. ಈ ಷೇರು ಕಳೆದ 5 ದಿನಗಳಲ್ಲಿ ಶೇ.18.10ರಷ್ಟು ಲಾಭ ನೀಡಿದ್ರೆ, 6 ತಿಂಗಳಿನಲ್ಲಿ ಶೇ.242.62ರಷ್ಟು ರಿಟರ್ನ್ಸ್‌ ನೀಡಿದೆ. 

ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರು ಕಳೆದೊಂದು ವರ್ಷದಲ್ಲಿ ಬರೋಬ್ಬರಿ ಶೇ.315.68ರಷ್ಟು ಲಾಭವನ್ನು ನೀಡಿದೆ. ಅದೇ ರೀತಿ ಕಳೆದ 5 ವರ್ಷದಲ್ಲಿ ಈ ಷೇರು ಬಂಪರ್‌ ಅಂದರೆ ಶೇ.905.24ರಷ್ಟು ರಿಟರ್ನ್ಸ್‌ ನೀಡುವ ಮೂಲಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. 

1999ರ ಜನವರಿ 6ರಂದು ಕೇವಲ 72 ರೂ. ಇದ್ದ ಈ ಷೇರು ಇಂದು 8,428 ರೂ.ಗೆ ತಲುಪಿದೆ. ಅಲ್ಲಿಂದ ಇಲ್ಲಿವರೆಗೆ ಈ ಷೇರು ಬರೋಬ್ಬರಿ ಶೇ.11,498.18ರಷ್ಟು ಬಂಪರ್‌ ಲಾಭವನ್ನು ನೀಡಿದೆ. ಈ ಷೇರು ಹೂಡಿಕೆದಾರರನ್ನು ಕೋಟ್ಯಧಿಪತಿಯನ್ನಾಗಿಸಿದೆ. ಈ ಷೇರಿನ 52 ವಾರಗಳ ಗರಿಷ್ಠ 8,428.40 ರೂ. ಆದರೆ, 52 ವಾರಗಳ ಕನಿಷ್ಠ 1,730 ರೂ. ಆಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link