ತೆಂಗಿನೆಣ್ಣೆ ಜೊತೆ ಈ ಎಲೆಯನ್ನು ಅರೆದು ತಲೆಗೆ ಹಚ್ಚಿದರೆ 10 ನಿಮಿಷದಲ್ಲಿ ಬಿಳಿಕೂದಲು ಕಪ್ಪಾಗುತ್ತೆ! ಹಚ್ಚಿದ ಕೂಡಲೇ ಪರ್ಮನೆಂಟ್ ರಿಸಲ್ಟ್!

Sun, 12 Nov 2023-8:23 pm,

ಈ ಹಿಂದೆ ವಯಸ್ಸಾದವರಲ್ಲಿ ಮಾತ್ರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಈ ಸಮಸ್ಯೆ ಯುವಜನರಲ್ಲಿಯೂ ಕಾಣಿಸಿಕೊಳ್ಳಲು ಆರಂಭಿಸಿದೆ. ಕೂದಲು ಬಿಳಿಯಾಗುವುದರ ಹಿಂದೆ ಕೆಟ್ಟ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಅನುವಂಶಿಕತೆ ಅಥವಾ ಔಷಧಿಗಳ ಬಳಕೆಯೂ ಕಾರಣಗಳಿರಬಹುದು.

ಹೀಗಾಗಿ ದುಬಾರಿ ಮತ್ತು ರಾಸಾಯನಿಕ ಉತ್ಪನ್ನಗಳ ಬದಲಿಗೆ ಕೆಲವು ಮನೆಮದ್ದು ಮತ್ತು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳು ಬಿಳಿಕೂದಲಿಗೆ ತಕ್ಷಣದ ಪರಿಹಾರ ನೀಡುವುದು ಖಂಡಿತ.

ಕರಿಬೇವಿನ ಎಲೆಗಳು: ಕರಿಬೇವಿನ ಎಲೆಗಳಲ್ಲಿ ಹಲವು ಬಗೆಯ ಔಷಧೀಯ ಗುಣಗಳಿವೆ. ಇದನ್ನು ಅನೇಕ ರೀತಿಯ ರೋಗಗಳಿಗೆ ಮದ್ದಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳು ನಮ್ಮ ಕೂದಲನ್ನು ತುಂಬಾ ಸುಲಭವಾಗಿ ಕಪ್ಪಾಗಿಸುತ್ತದೆ. 2 ಚಮಚ ಆಮ್ಲಾ ಪುಡಿ ಮತ್ತು 2 ಚಮಚ ಬ್ರಾಹ್ಮಿ ಪುಡಿಯನ್ನು ತೆಗೆದುಕೊಳ್ಳಿ. ಈಗ ಕರಿಬೇವಿನ ಎಲೆಗಳನ್ನು ನುಣ್ಣಗೆ ರುಬ್ಬಿಕೊಂಡು, ಆ ಮಿಶ್ರಣಕ್ಕೆ ಅವರೆಡು ಪುಡಿಗಳನ್ನು ಸೇರಿಸಿ. ಈಗ ಈ ಮಿಶ್ರಣಕ್ಕೆ ನೀರು ಸೇರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 1 ಗಂಟೆ ಇರಿಸಿ, ನಂತರ ತೊಳೆಯಿರಿ.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯನ್ನು ಕೂದಲಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು, ಅದಕ್ಕೆ ನಿಂಬೆ ರಸವನ್ನು ಸೇರಿಸಿ. ನೆತ್ತಿಯಿಂದ ಕೂದಲಿನವರೆಗೆ ಸಂಪೂರ್ಣವಾಗಿ ಹಚ್ಚಿ. ಸುಮಾರು 1 ರಿಂದ 2 ಗಂಟೆಗಳ ಕಾಲ ಇಟ್ಟು, ಬಳಿಕ ಕೂದಲನ್ನು ತೊಳೆಯಿರಿ. ಪ್ರತಿ ವಾರ ಈ ಮನೆಮದ್ದನ್ನು ಅನುಸರಿಸಿದರೆ ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.

ಬ್ಲ್ಯಾಕ್ ಟೀ: ಚಹಾವನ್ನು ಕೆಲವೊಮ್ಮೆ ಸೌಂದರ್ಯವರ್ಧಕ ಉತ್ಪನ್ನವಾಗಿಯೂ ಬಳಸಲಾಗುತ್ತದೆ. ಇದು ಕೂದಲನ್ನು ಕಪ್ಪಾಗಿಸಲು ಕೂಡ ಸಹಕಾರಿ. ಚಹಾ ಎಲೆಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ. ಬಳಿಕ ಪಕ್ಕಕ್ಕೆ ಇರಿಸಿ ತಣ್ಣಗಾಗಲು ಬಿಡಿ.  ನಂತರ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ. ಈ ಎಲೆಯನ್ನು ಅರೆದು ತೆಂಗಿನೆಣ್ಣೆ ಜೊತೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೂ ಕೂಡ ರಿಸಲ್ಟ್ ಗ್ಯಾರಂಟಿ.

ಅಲೋವೆರಾ: ಅಲೋವೆರಾದಲ್ಲಿ ಹಲವು ರೀತಿಯ ಔಷಧೀಯ ಗುಣಗಳಿವೆ. ಇದು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಮಾತ್ರವಲ್ಲ, ನಮ್ಮ ಒಟ್ಟಾರೆ ದೈಹಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಅಲೋವೆರಾ ಕೂಡ ನಮ್ಮ ಕೂದಲನ್ನು ಕಪ್ಪಾಗಿಸುತ್ತದೆ. ಇದಕ್ಕೆ ಅಲೋವೆರಾ ಜೆಲ್ ಅನ್ನು ಹಚ್ಚಿದರೆ ಸಾಕು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link