ಇವರೇ ನೋಡಿ ವಿರಾಟ್ ಕೊಹ್ಲಿ ತಂದೆ… ದೇಶದ ಪ್ರಖ್ಯಾತ ಕ್ರಿಮಿನಲ್ ಲಾಯರ್ ಆಗಿದ್ರು ಇವ್ರು..!
ಟೀಂ ಇಂಡಿಯಾದ ಸೂಪರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಒಂದೊಮ್ಮೆ ಎಮ್ಮಿ ಪ್ರಶಸ್ತಿ ವಿಜೇತ ಪತ್ರಕರ್ತ ಗ್ರಹಾಂ ಬೆನ್‌ಸಿಂಗರ್’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಂದೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ತಂದೆಯ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, “ನನ್ನ ತಂದೆ ಕ್ರಿಮಿನಲ್ ಲಾಯರ್ ಆಗಿದ್ರು. ಜೊತೆಗೆ ಆನ್’ಲೈನ್ ಶೇರ್ ಟ್ರೇಡಿಂಗ್ ಮಾಡುತ್ತಿದ್ದರು. 2006ರ ಸುಮಾರಿಗೆ ಇದ್ದಕ್ಕಿದ್ದಂತೆ ಅವರ ಆನ್‌ಲೈನ್ ಟ್ರೇಡಿಂಗ್ ಖಾತೆ ಕ್ರ್ಯಾಶ್ ಆಯಿತು. ಇದರಿಂದ ಮಾನಸಿಕವಾಗಿ ತುಂಬಾ ದುಃಖಿತರಾದರು. ಇದೇ ಕಾರಣದಿಂದ ಪಾರ್ಶ್ವವಾಯು ಬಂತು’ ಎಂದರು.
ಹೀಗಾದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ತುಂಬಾ ತಡವಾಗಿತ್ತು. ನನ್ನ ತಾಯಿ ಮತ್ತು ಸಹೋದರಿ ಅಳಲು ಪ್ರಾರಂಭಿಸಿದರು. ಆದರೆ ನನ್ನ ಕಣ್ಣಲ್ಲಿ ನೀರು ಇರಲಿಲ್ಲ. ನಾನು ಶಾಕ್’ಗೊಳಗಾದೆ. ಆ ಸಮಯದಲ್ಲಿ ನಾನೇಕೆ ಅಳಲಿಲ್ಲವೋ ಗೊತ್ತಿಲ್ಲ, ನನ್ನೊಳಗೆ ಏನೋ ನಡೆಯುತ್ತಿತ್ತು. ಮರುದಿನ ನನಗೆ ಕೋಚ್’ನಿಂದ ಕರೆ ಬಂದಾಗ ನಾನು ಅವರಿಗೆ ಎಲ್ಲವನ್ನೂ ಹೇಳಿದೆ. ಆಗ ನೀನೇನು ಮಾಡ್ತೀಯ ಈಗ ಅಂದ್ರು. ಅದಕ್ಕೆ ನಾನು ಆಡುತ್ತೇನೆ, ನಾನು ಕ್ರಿಕೆಟ್ ಪಂದ್ಯವನ್ನು ಮಿಸ್ ಮಾಡೊಕೊಳ್ಳಬಾರದು ಎಂದು ಹೇಳಿದೆ.
ಇನ್ನು ವಿರಾಟ್ ಕೊಹ್ಲಿ 5 ನವೆಂಬರ್ 1988 ರಂದು ದೆಹಲಿಯಲ್ಲಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪ್ರೇಮ್ ಕೊಹ್ಲಿ ಕ್ರಿಮಿನಲ್ ವಕೀಲರಾಗಿದ್ರೆ, ತಾಯಿ ಸರೋಜ್ ಕೊಹ್ಲಿ ಗೃಹಿಣಿ. ವಿಕಾಸ್ ಎಂಬ ಹಿರಿಯ ಸಹೋದರ ಮತ್ತು ಭಾವನಾ ಎಂಬ ಅಕ್ಕ ಇದ್ದಾರೆ.
ಕೊಹ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ವಿಶಾಲ ಭಾರತಿ ಪಬ್ಲಿಕ್ ಸ್ಕೂಲ್’ನಲ್ಲಿ ಪ್ರಾರಂಭಿಸಿದರು. ಅವರ ಕುಟುಂಬದ ಪ್ರಕಾರ, ಕೊಹ್ಲಿ ಕೇವಲ ಮೂರು ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದ್ರು. ಅಂದರೆ ಕ್ರಿಕೆಟ್ ಬ್ಯಾಟ್ ಎತ್ತಿಕೊಂಡು ತನ್ನದೇ ಶೈಲಿಯಲ್ಲಿ ಆಟವಾಡುತ್ತಿದ್ದರಂತೆ.