ಭಾರಿ ತೂಕ ಇಳಿಸಿಕೊಂಡ ಟೀಂ ಇಂಡಿಯಾ ಬ್ಯಾಟ್ಸಮನ್!! 117ಕೆಜಿಯಿಂದ 75ಕೆಜಿ ಪ್ರಯಾಣ ಹೀಗಿತ್ತು....
ಭಾರತದ ಬ್ಯಾಟ್ಸ್ಮನ್ ಒಬ್ಬರು 117 ಕೆಜಿ 75 ಕೆಜಿಗೆ ತಮ್ಮ ತೂಕವನ್ನು ಇಳಿಸಿ ಕೊಳ್ಳುವ ಮೂಲಕ ಫಿಟ್ ಅಂಡ್ ಫೈನ್ ಆಗಿ ಬಿಟ್ಟಿದ್ದಾರೆ.
ಅವರು ಬೇರೆ ಯಾರು ಅಲ್ಲ ಟೀಮ್ ಇಂಡಿಯಾ ಶಿವಂ ದುಬೆ. ಅಧಿಕ ತೂಕದಿಂದ ಬೊಜ್ಜನ ಸಮಸ್ಯೆಯಿಂದ ಬಳಲುತ್ತಿದ್ದರು ಈ ಕಾರಣದಿಂದಾಗಿ ಕ್ರಿಕೆಟ್ ಆಡುವುದನ್ನು ನಿಲ್ಲಿಸಿ ತೂಕವನ್ನು ಇಳಿಸಿಕೊಂಡಿದ್ದಾರೆ.
117 ಕೆಜಿ ಇದ್ದಂತಹ ಶಿವಂ 75 ಕೆಜಿಗೆ ತಲುಪುವಷ್ಟು ಫಿಟ್ನೆಸ್ ಜರ್ನಿಯನ್ನು ಅನುಭವಿಸಿದ್ದಾರೆ. ಅವರು ಹೇಳುವ ಪ್ರಕಾರ ಈ ಜರ್ನಿ ತುಂಬಾ ಕಷ್ಟಕರವಾಗಿತ್ತು ಮತ್ತು ಆಹಾರ ಕಟ್ಟುನಿಟ್ಟಿನ ವ್ಯಾಯಾಮ ಎಲ್ಲದರಿಂದ ಇದು ಸಾಧ್ಯವಾಯಿತು ಎಂದಿದ್ದಾರೆ.
ಆರೋಗ್ಯಕರ ಆಹಾರ ಜೊತೆಗೆ ಜಿಮ್ ಹೋಗುವುದು ಸಾಕಷ್ಟು ವರ್ಕೌಟ್ ಮಾಡಿ, ಸೈಕ್ಲಿಂಗ್, ವ್ಯಾಯಾಮ, ವೇಟ್ ಲಿಫ್ಟಿಂಗ್ ಈ ಮೂಲಕ ತೂಕವನ್ನು ಇಳಿಸಿಕೊಂಡಿದ್ದಾರೆ
ಶಿವಂ ಹೇಳುವ ಪ್ರಕಾರ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರಲು ಬಯಸಿದರೆ ದೈಹಿಕ ಚಟುವಟಿಕೆಗಳನ್ನು ಮಾಡಬೇಕು ಮತ್ತು ಇದರಿಂದ ಆರೋಗ್ಯವಾಗಿರುವುದು ಎಂದು ಹೇಳುತ್ತಾರೆ.