Rohit Sharma: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಓದಿದ್ದೇನು ಗೊತ್ತಾ? ಹಿಟ್‌ಮ್ಯಾನ್‌ಗೂ ಸೌತ್‌ಗೂ ಇರೋ ನಂಟೇನು?!
ರೋಹಿತ್ ಶರ್ಮಾ ತಂದೆಯ ಹೆಸರು ಗುರುನಾಥ್ ಶರ್ಮಾ ಇವರು ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.. ತಾಯಿ ಪೂರ್ಣಿಮಾ ಶರ್ಮಾ... ತೆಲುಗು ಕುಟುಂಬವೊಂದರಲ್ಲಿ ಜನಿಸಿದ ರೋಹಿತ್ ಅವರ ಮಾತೃ ಭಾಷೆ ತೆಲುಗು.. ಇವರ ತಾಯಿ ಸೌತ್‌ನವರಾಗಿದ್ದರಿಂದ ಹಿಟ್ ಮ್ಯಾನ್‌ಗೂ ಸೌತ್‌ಗೂ ನಂಟಿದೆ..
ರೋಹಿತ್ ಶರ್ಮಾ ಚಿಕ್ಕವರಾಗಿದ್ದಾಗ ಅವರ ಕುಟುಂಬ ಮುಂಬೈನ ಉಪನಗರ ಡೊಂಬಿವಲಿಗೆ ಸ್ಥಳಾಂತರವಾಯಿತು.. ಆರ್ಥಿಕ ಪರಿಸ್ಥಿತಿಯಿಂದಾಗಿ ರೋಹಿತ್ ಅವರ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದರು..
ಇನ್ನು ಕ್ಯಾಪ್ಟನ್ ರೋಹಿತ್ ಶರ್ಮಾ 12ನೇ ತರಗತಿ ಓದಿದ್ದಾರೆ.. ಮುಂದೆ ಅವರು ಕಾಲೇಜಿಗೆ ಹೋಗಿಲ್ಲ.. ಕ್ರಿಕೆಟ್‌ಗೆ ಸಮಯ ನೀಡುವುದಕ್ಕಾಗಿ ಅವರು ಕಾಲೇಜ್ ಮೆಟ್ಟಿಲನ್ನೇ ಏರಲಿಲ್ಲ..
ರೋಹಿತ್ ಶರ್ಮಾ 2015 ರಲ್ಲಿ Sports Manager ರಿತಿಕಾ ಸಜ್ದೇಹ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇವರಿಬ್ಬರೂ ಆರು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು.. 2018 ಪುತ್ರಿ ಆದರಾಗೆ ಜನ್ಮ ನೀಡಿದ್ದಾರೆ..
ರೋಹಿತ್ ಮೊದಲು ಆಫ್ ಸ್ಪಿನ್ನರ್ ಬೌಲರ್ ಆಗಿದ್ದರು,, ನಂತರ ದಿನೇಶ್ ಲಾಡ್ ಅವರ ಬ್ಯಾಟಿಂಗ್ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಿದ ಕಾರಣ ಇಂದು ಅವರು ಟೀಂ ಇಂಡಿಯಾದ ಎಲ್ಲರ ಫೇವರೆಟ್ ಹಿಟ್ ಮ್ಯಾನ್ ಆಗಿದ್ದಾರೆ..