ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎಷ್ಟು ಕೋಟಿ ಒಡೆಯ ಗೊತ್ತಾ? ವಿರಾಟ್ ಆದಾಯಕ್ಕಿಂತ ಹೆಚ್ಚೇ ಇದೆ ಹಿಟ್ ಮ್ಯಾನ್ INCOME!
ರೋಹಿತ್ ಶರ್ಮಾ ಪ್ರಸ್ತುತ ಟೀಮ್ ಇಂಡಿಯಾದ ನಾಯಕರಾಗಿದ್ದು, ಬಿಸಿಸಿಐ ಎ+ ವಿಭಾಗದಲ್ಲಿ ಇದ್ದಾರೆ. ಇದಕ್ಕಾಗಿ ಮಂಡಳಿಯು ರೋಹಿತ್’ಗೆ ವಾರ್ಷಿಕ 7 ಕೋಟಿ ರೂ.ಗಳನ್ನು ವೇತನವಾಗಿ ನೀಡುತ್ತದೆ. ಇದಲ್ಲದೇ ಮಂಡಳಿಯಿಂದ ಪಂದ್ಯ ಶುಲ್ಕವಾಗಿ 15 ಲಕ್ಷ ರೂ, ಜೊತೆಗೆ ಏಕದಿನ ಪಂದ್ಯ ಆಡಲು 6 ಲಕ್ಷ ಹಾಗೂ ಟಿ-20 ಪಂದ್ಯಕ್ಕೆ 3 ಲಕ್ಷ ರೂ ನೀಡುತ್ತದೆ.
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿಲ್ಲದಿದ್ದರೂ ಫ್ರಾಂಚೈಸಿ 16 ಕೋಟಿ ರೂ. ನೀಡುತ್ತದೆ. ವರದಿಗಳ ಪ್ರಕಾರ ರೋಹಿತ್ ಐಪಿಎಲ್’ನಲ್ಲಿ ಇದುವರೆಗೆ 178 ಕೋಟಿ ರೂ. ಗಳಿಕೆ ಮಾಡಿದ್ದಾರೆ.
ಇನ್ನು ರೋಹಿತ್ ಶರ್ಮಾ ಅವರ ಅಭಿಮಾನಿಗಳ ಸಂಖ್ಯೆ ಅದ್ಭುತವಾಗಿದೆ. Instagram ನಲ್ಲಿ 37.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅವರು, ಒಂದು ಪೋಸ್ಟ್’ಗೆ 75 ಲಕ್ಷ ರೂ. ಪಡೆಯುತ್ತಾರೆ.
ರೋಹಿತ್ ಶರ್ಮಾ ಜಾಹೀರಾತಿನಿಂದಲೂ ಸಾಕಷ್ಟು ಸಂಪಾದಿಸುತ್ತಾರೆ. ಪ್ರಸ್ತುತ ಸುಮಾರು 28 ಬ್ರಾಂಡ್’ಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಇದು ಜಿಯೋ ಸಿನಿಮಾ, ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್, ಗೊಯಿಬಿಬೋ, ಸಿಯೆಟ್ ಟೈರ್, ಹಬ್ಲೋಟ್, ಉಷಾ, ಒಪ್ಪೋ, ಹೈಲ್ಯಾಂಡರ್’ನಂತಹ ದೊಡ್ಡ ಕಂಪನಿಗಳನ್ನು ಒಳಗೊಂಡಿದೆ. ವರದಿಗಳ ಪ್ರಕಾರ, ರೋಹಿತ್ ಪ್ರತಿ ಜಾಹೀರಾತಿಗೆ ಸರಾಸರಿ 5 ಕೋಟಿ ರೂ. ಪಡೆಯುತ್ತಾರೆ,
ರೋಹಿತ್ ಶರ್ಮಾ ಮುಂಬೈನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಸುಮಾರು 30 ಕೋಟಿ ರೂ. ಮೌಲ್ಯದ್ದಾಗಿದೆ. ಈ ಫ್ಲಾಟ್ ತುಂಬಾ ದುಬಾರಿಯಾಗಲು ಕಾರಣವೆಂದರೆ ಅರಬ್ಬಿ ಸಮುದ್ರದ 270 ಡಿಗ್ರಿ ನೋಟ ಇಲ್ಲಿದೆ. ಇದಲ್ಲದೇ ರೋಹಿತ್ ಹೈದರಾಬಾದ್ ನಲ್ಲಿ 5 ಕೋಟಿ ಮೌಲ್ಯದ ಮನೆಯನ್ನೂ ಖರೀದಿಸಿದ್ದಾರೆ.
ರೋಹಿತ್ ಶರ್ಮಾ ನಿವ್ವಳ ಮೌಲ್ಯ ಸುಮಾರು 214 ಕೋಟಿ ರೂ. ಇನ್ನು ಒಟ್ಟು ಆದಾಯದಲ್ಲಿ ವಿರಾಟ್ ಕೊಹ್ಲಿ ಸಮವಿಲ್ಲದಿದ್ದರೂ, ಬಿಸಿಸಿಐ ಆದಾಯದ ವಿಚಾರದಲ್ಲಿ ವಿರಾಟ್’ಗಿಂತ ಹೆಚ್ಚೇ ಸಂಪಾದನೆ ಮಾಡುತ್ತಾರೆ ಶರ್ಮಾ.