ಅಂದು ವಿರಾಟ್ ಮೆನೇಜರ್… ಇಂದು ಈ ಕ್ರಿಕೆಟಿಗನ ಮುದ್ದಿನ ಮಡದಿ: 5 ಮಿಲಿಯನ್’ಗೂ ಅಧಿಕ ಸಂಪತ್ತಿನ ಒಡತಿ ಈ ಬಾಲಕಿ ಯಾರೆಂದು ಗೆಸ್ ಮಾಡಿ

Tue, 13 Feb 2024-3:51 pm,

ನಾವಿಂದು ಓರ್ವ ಸೆಲೆಬ್ರಿಟಿಯ ಬಾಲ್ಯದ ಫೋಟೋವನ್ನು ತೋರಿಸುತ್ತಿದ್ದೇವೆ. ಈಕೆ ಒಂದು ಕಾಲದಲ್ಲಿ ವಿರಾಟ್ ಕೊಹ್ಲಿ ಮನೇಜರ್ ಆಗಿದ್ದು, ಈಗ ಸ್ಟಾರ್ ಕ್ರಿಕೆಟಿಗನ ಮುದ್ದಿನ ಮಡದಿ. ಜೊತೆಗೆ ಸಾಕಷ್ಟು ಸಂಪತ್ತಿನ ಒಡತಿಯೂ ಹೌದು.  ಈ ಫೋಟೋ ನೋಡಿದರೂ ಸಹ ಗುರುತು ಸಿಕ್ಕಿಲ್ಲವಾದ್ರೆ, ನಾವೇ ಉತ್ತರ ಹೇಳ್ತೀವಿ ಕೇಳಿ.

ಈ ಬಾಲಕಿ ಬೇರಾರು ಅಲ್ಲ, ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್. 2007 ರಲ್ಲಿ ಕಾರ್ನರ್‌ ಸ್ಟೋನ್‌ ಎಂಬಲ್ಲಿ ಟ್ಯಾಲೆಂಟ್ ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದರು.

ಇನ್ನು ರಿತಿಕಾ 2008 ರಲ್ಲಿ ಟಿವಿ ಜಾಹೀರಾತಿನ ಚಿತ್ರೀಕರಣದಲ್ಲಿ ಸಂದರ್ಭದಲ್ಲಿ ರೋಹಿತ್ ಅವರನ್ನು ಭೇಟಿಯಾದರು. ಅಷ್ಟೇ ಅಲ್ಲದೆ, ಇವರಿಬ್ಬರನ್ನು ಪರಿಚಯ ಮಾಡಿಸಿದ್ದು ಬೇರಾರು ಅಲ್ಲ, ಯುವರಾಜ್ ಸಿಂಗ್. ಅಂದಹಾಗೆ ಯುವರಾಜ್ ಸಿಂಗ್ ರಿತಿಕಾ ಅವರನ್ನು ತನ್ನ ಸಹೋದರಿಯಂತೆ ಪರಿಗಣಿಸುತ್ತಾರೆ.

ಇನ್ನು ದೇಶೀಯ ಪಂದ್ಯವಾಗಲಿ, ಅಂತರರಾಷ್ಟ್ರೀಯವಾಗಲಿ ಅಥವಾ ಐಪಿಎಲ್ ಆಗಿರಲಿ ಪತಿಯ ಆಟವನ್ನು ಬೆಂಬಲಿಸಲು ರಿತಿಕಾ ಸ್ಟೇಡಿಯಂಗೆ ಆಗಮಿಸುತ್ತಾರೆ.

ರಿತಿಕಾ ಸಜ್ದೇಹ್ ಪತಿ ರೋಹಿತ್ ಜೊತೆ ಕೆಲಸ ಮಾಡುವ ಮುನ್ನ, ವಿರಾಟ್ ಕೊಹ್ಲಿಗೆ ಮೆನೇಜರ್ ಆಗಿ 3 ವರ್ಷಗಳ ಕಾಲ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ, ಕೆಲವು ವರದಿಗಳ ಪ್ರಕಾರ ವಿರಾಟ್ ರಿತಿಕಾ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link