ಹಸಿವು ನೀಗಿಸಲು ಮ್ಯಾಗಿ, ಜೀವನ ಸಾಗಿಸಲು 200 ರೂ.ಗೆ ಕ್ರಿಕೆಟ್! 8ನೇ ಕ್ಲಾಸ್ ಓದಿರುವ ಈತ ಇಂದು ಟೀಂ ಇಂಡಿಯಾದ ಸ್ಟಾರ್ ಬೌಲರ್... ಕೋಟಿ ಆಸ್ತಿ ಮಾಲೀಕ ಯಾರೆಂದು ಗೆಸ್ ಮಾಡಿ!
ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆ ಸ್ಥಾನ ಮುಟ್ಟಲು ಎಷ್ಟೋ ಶ್ರಮವನ್ನು ಪಡಬೇಕಾಗಿರುವುದು ಅಷ್ಟೇ ಸತ್ಯವಾದ ಮಾತು. ಇನ್ನು ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಪ್ರತಿಯೊಬ್ಬರು ಸಹ ಒಂದಲ್ಲ ಒಂದು ಕಷ್ಟದ ಹಾದಿಯಲ್ಲೇ ಬಂದಿದ್ದಾರೆ ಹೊರತು, ಹೂವಿನ ಹಾಸಿಗೆಯಲ್ಲೇ ನಡೆದವರು ಯಾರೂ ಇಲ್ಲ.
ಅಂತಹದ್ದೇ ಶ್ರಮ ಜೀವನ ನಡೆಸಿ ಕೊನೆಗೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡು, ಇಂದು ಕ್ರಿಕೆಟ್ ಲೋಕವೇ ಮೆಚ್ಚುವಂತೆ ಬದುಕುತ್ತಿರುವವರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಇಂದು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹಾರ್ದಿಕ್ ನಡೆದು ಬಂದ ಹಾದಿ ಎಂತಹದ್ದು ಎಂಬುದರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಕ್ರಿಕೆಟ್ ಮೈದಾನದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿ ಮಿಂಚುತ್ತಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಒಂದು ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪಾಂಡ್ಯ, ಇಂದು ಕೋಟಿ ಒಡೆಯರಾಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪಾಂಡ್ಯ ಅವರ ಪ್ರಸ್ತುತ ನಿವ್ವಳ ಮೌಲ್ಯ ಸುಮಾರು $11.4 ಮಿಲಿಯನ್. ಅಂದರೆ ಸರಿಸುಮಾರು 95 ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಕ್ರಿಕೆಟ್ ಹೊರತುಪಡಿಸಿ ಪಾಂಡ್ಯ ಅವರ ದೊಡ್ಡ ಆದಾಯದ ಮೂಲವೆಂದರೆ ಜಾಹೀರಾತು ಮತ್ತು ಸಾಮಾಜಿಕ ಮಾಧ್ಯಮ. ಇವುಗಳಿಂದ ಸಾಕಷ್ಟು ಹಣ ಗಳಿಸುತ್ತಾರೆ.
ಬಲಗೈ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗದ ಬೌಲರ್ ಹಾರ್ದಿಕ್ ಪಾಂಡ್ಯ 2016 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದರು. ತಂಡದಲ್ಲಿ ಸ್ಥಾನ ಪಡೆದ ಕೆಲವೇ ತಿಂಗಳುಗಳಲ್ಲಿ ತನ್ನ ಸಾಮಾರ್ಥ್ಯ ಪ್ರದರ್ಶಿಸಿದ ಅವರು, ಟೀಂ ಇಂಡಿಯಾದ ನಾಯಕನಾಗಿಯೂ ಮುನ್ನಡೆಸಿದ್ದಾರೆ.
ಇದಷ್ಟೇ ಅಲ್ಲದೆ, ಐಪಿಎಲ್ ಸಂದರ್ಭದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದಲ್ಲದೆ, ಚೊಚ್ಚಲ ನಾಯಕತ್ವದಲ್ಲೇ ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಗುಜರಾತ್ ಟೈಟಾನ್ಸ್‌ನಲ್ಲಿ ನಾಯಕರಾಗಿದ್ದಾಗ ಅವರ ಸಂಭಾವನೆ 15 ಕೋಟಿ ರೂ. ಇತ್ತು. ಪ್ರಸ್ತುತ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಸಂಬಂಧ ಹೊಂದಿದ್ದು, ಈ ತಂಡದ ನಾಯಕರಾಗಿದ್ದಾರೆ. ಅಂದಹಾಗೆ ಪಾಂಡ್ಯ ಅವರ ತಿಂಗಳ ಆದಾಯ ಸುಮಾರು 1.5 ಕೋಟಿ ರೂ.
ಹಾರ್ದಿಕ್ ಪಾಂಡ್ಯ ಅವರು 2016 ರಲ್ಲಿ ಬರೋಡದಲ್ಲಿ ಸುಮಾರು 3.6 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದರು. ಇದಷ್ಟೇ ಅಲ್ಲದೆ, ಬೋಟ್, ಸಿನ್ ಡೆನಿಮ್, ಗಲ್ಫ್ ಆಯಿಲ್ ಇಂಡಿಯಾ, ಡ್ರೀಮ್ 11, ಅಮೆಜಾನ್ ಅಲೆಕ್ಸಾ, ರಿಲಯನ್ಸ್ ರಿಟೇಲ್ ಮತ್ತು ಎಸ್ ಜಿ ಕ್ರಿಕೆಟ್‌ನಂತಹ ಅನೇಕ ಬ್ರಾಂಡ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಜಾಹಿರಾತುಗಳ ಮೂಲಕ ಈ ಕಂಪನಿಗಳಿಂದ ಕೋಟಿಗಟ್ಟಲೆ ಸಂಪಾದಿಸುತ್ತಾರೆ.
ಪಾಂಡ್ಯ ಅವರು ರೋಲ್ಸ್ ರಾಯ್ಸ್, ಲಂಬೋರ್ಘಿನಿ ಹುರಾಕನ್ ಇಬಿಒ, ಪೋರ್ಷೆ ಕಯೆನ್ನೆ, ಆಡಿ ಎ6, ರೇಂಜ್ ರೋವರ್ ವೋಗ್, ಜೀಪ್ ಕಂಪಾಸ್, ಮರ್ಸಿಡಿಸ್ ಜಿ ವ್ಯಾಗನ್ ಮತ್ತು ಟೊಯೊಟಾ ಎಟಿಯೋಸ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.