Photo Gallery: ತಿರುಪತಿಗೆ ಭೇಟಿ ನೀಡಿದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್
)
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯ ದೇವಾಲಯ ತಿರುಪತಿಗೆ ಟೀಂ ಇಂಡಿಯಾದ ಆಟಗಾರರಾದ ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ಒಟ್ಟಿಗೆ ಭೇಟಿ ನೀಡಿದ್ದಾರೆ.
)
ಭಗವಾನ್ ವಿಷ್ಣುವಿನ ವೆಂಕಟೇಶ್ವರ ಅವತಾರಕ್ಕೆ ಸಮರ್ಪಿತವಾಗಿರುವ ತಿರುಪತಿ ದೇವಾಲಯಕ್ಕೆ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
)
ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಮತ್ತು ಹೊಸ ಕೆಲಸದಲ್ಲಿ ಯಶಸ್ಸು ಸಿಗಲೆಂದು ಲಕ್ಷಾಂತರ ಭಕ್ತರು ಈ ಸನ್ನಿಧಾನಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿ ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ದೇವಾಲಯಕ್ಕೆ ಭೇಟಿ ನೀಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ತಮ್ಮ Instagram ಖಾತೆಯಲ್ಲಿ ಅಕ್ಷರ್ ಪಟೇಲ್ ಜೊತೆಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ ಹಂಚಿಕೊಂಡಿರುವ ರಿಷಬ್ ಪಂತ್ ಖುಷಿ ಹಂಚಿಕೊಂಡಿದ್ದಾರೆ.
‘ಈ ಸ್ಥಳದ ಶಕ್ತಿಯನ್ನು ವಿವರಿಸಲು ಸಾಕಷ್ಟು ಪದಗಳಿಲ್ಲ. ದೇವಸ್ಥಾನದಿಂದ ಹೊರಬರಲು ಮನಸ್ಸಾಗಲಿಲ್ಲ. ನಂಬಲಾಗದ ಧನಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿ ನಮ್ಮನ್ನು ಆವರಿಸಿತ್ತು’ ಎಂದು ರಿಷಬ್ ಪಂತ್ ತಮ್ಮ ಪೋಸ್ಟ್ ಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
View this post on Instagram