ಸಖತ್ ಕ್ಯೂಟ್ ಆಗಿರುವ ಕ್ರಿಕೆಟರ್ ಅಶ್ವಿನ್ ಪತ್ನಿ ಏನು ಕೆಲಸ ಮಾಡ್ತಾರೆ? ಇವರು ಓದಿದ್ದೆಷ್ಟು ಗೊತ್ತಾ?
)
ರವಿಚಂದ್ರನ್ ಅಶ್ವಿನ್ ಅಶ್ವಿನ್ ಅವರ ಪತ್ನಿಯ ಹೆಸರು ಪ್ರೀತಿ ನಾರಾಯಣ್ ಮತ್ತು ಅವರು ಮೇ 26, 1988 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಇವರು ಬಿ.ಟೆಕ್ ಪದವಿ ಪಡೆದಿದ್ದಾರೆ.
)
ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಕೆಲವೇ ದಿನಗಳಲ್ಲಿ ಪ್ರೀತಿ ನಾರಾಯಣ್ ಅವರೊಂದಿಗೆ 13 ನವೆಂಬರ್ 2011 ರಂದು ವಿವಾಹವಾದರು.
)
ಅಶ್ವಿನ್ ಮತ್ತು ಪ್ರೀತಿ ಚೆನ್ನೈನಲ್ಲಿರುವ ಪದ್ಮ ಶೇಷಾದ್ರಿ ಬಾಲ ಭವನ ಶಾಲೆಯಲ್ಲಿ ಒಟ್ಟಿಗೆ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ.. ಇವರಿಬ್ಬರ ಮೊದಲ ಭೇಟಿಯು ಅವರ ಶಾಲಾ ದಿನಗಳಲ್ಲಿಯೇ ನಡೆದಿತ್ತು..
ಪ್ರೀತಿ ನಾರಾಯಣ್ ಯಾವುದೇ ನಿರ್ದಿಷ್ಟ ವೃತ್ತಿಯಲ್ಲಿಲ್ಲ.. ಈಕೆ ಗೃಹಿಣಿ. ಪಂದ್ಯಗಳ ಸಮಯದಲ್ಲಿ ಅವರು ಮೈದಾನದಲ್ಲಿ ಅಶ್ವಿನ್ ಅವರನ್ನು ಬೆಂಬಲಿಸುವುದನ್ನು ಹೆಚ್ಚಾಗಿ ಕಾಣಬಹುದು.
ಅಶ್ವಿನ್ ಮತ್ತು ಪ್ರೀತಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.. ಮೊದಲ ಮಗಳ ಹೆಸರು ಅಕಿರಾ, ಅವರು 2015 ರಲ್ಲಿ ಜನಿಸಿದರು ಮತ್ತು ಅವರ ಎರಡನೇ ಮಗಳ ಹೆಸರು ಆಧ್ಯ.
ರವಿಚಂದ್ರನ್ ಅಶ್ವಿನ್ ಅವರ 100ನೇ ಟೆಸ್ಟ್ ಪಂದ್ಯದಲ್ಲಿ ಬೆಂಬಲ ನೀಡಲು ಪ್ರೀತಿ ನಾರಾಯಣ್ ಕೂಡ ಧರ್ಮಶಾಲಾಗೆ ಬಂದಿದ್ದರು..