ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಇವರೇ: ಕೊಹ್ಲಿ, ರೋಹಿತ್’ರನ್ನೂ ಮೀರಿಸಿದ ಈತ ಈ ವರ್ಷವೇ ಘೋಷಿಸಲಿದ್ದಾನೆ ನಿವೃತ್ತಿ!
ಪ್ರಸ್ತುತ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಎಣಿಸಲ್ಪಟ್ಟಿದೆ. ಬಿಸಿಸಿಐ ತನ್ನ ಕೋಚ್‌ಗಳಿಗೆ ಅತ್ಯಧಿಕ ಸಂಭಾವನೆ ನೀಡುತ್ತದೆ. ಸದ್ಯ, ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಕೋಚ್ ಆಗಿದ್ದಾರೆ
51 ವರ್ಷದ ರಾಹುಲ್ ದ್ರಾವಿಡ್ ಅವರಿಗೆ ಕೋಚ್ ಆಗಿ ಬಿಸಿಸಿಐ ವಾರ್ಷಿಕ 10 ಕೋಟಿ ರೂಪಾಯಿ ಸಂಭಾವನೆ ನೀಡುತ್ತದೆ. ಇದು ವಿಶ್ವದ ಯಾವುದೇ ಕ್ರಿಕೆಟ್ ಕೋಚ್’ಗಿಂತ ಅತ್ಯಧಿಕವಾಗಿದೆ.
ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್ ಡೊನಾಲ್ಡ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಕ್’ಡೊನಾಲ್ಡ್’ಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ವಾರ್ಷಿಕವಾಗಿ ಆರೂವರೆ ಕೋಟಿ ರೂ. ನೀಡುತ್ತದೆ.
ಇಂಗ್ಲೆಂಡ್ 16.08 ಕೋಟಿ ರೂ.ಗೆ ಮೆಕಲಮ್ ಅವರನ್ನು 4 ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿತ್ತು. ನ್ಯೂಜಿಲೆಂಡ್’ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅವರನ್ನು 4 ವರ್ಷಗಳ ಕಾಲ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಇಂಗ್ಲೆಂಡ್ ನೇಮಕ ಮಾಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ 2022 ರಲ್ಲಿ ಟೆಸ್ಟ್ ತಂಡದ ಕೋಚ್ ಆಗಿ ಮೆಕಲಮ್ ಅವರನ್ನು ನೇಮಿಸಿತು. ECB 4 ವರ್ಷಗಳ ಕಾಲ ಮೆಕಲಮ್‌ಗೆ ಸರಿಸುಮಾರು 16.08 ಕೋಟಿ ರೂ. ನೀಡುತ್ತದೆ. ಅಂದರೆ ವಾರ್ಷಿಕ 4 ಕೋಟಿ ರೂ.ಗೂ ಹೆಚ್ಚು.
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾದ ಗ್ಯಾರಿ ಸ್ಟೆಡ್ ಅವರನ್ನು ಕ್ರಿಕೆಟ್ ನ್ಯೂಜಿಲೆಂಡ್ 2018 ರಲ್ಲಿ ತಂಡದ ಕೋಚ್ ಆಗಿ ನೇಮಿಸಿತು. ಮಾಧ್ಯಮ ವರದಿಗಳ ಪ್ರಕಾರ, ಕ್ರಿಕೆಟ್ ನ್ಯೂಜಿಲೆಂಡ್‌ನಿಂದ ಗ್ಯಾರಿ ಸ್ಟೇಡ್ ವಾರ್ಷಿಕವಾಗಿ 1.74 ಕೋಟಿ ರೂ. ಪಡೆಯುತ್ತಾರೆ. ಅವರ ಅಧಿಕಾರಾವಧಿಯನ್ನು 2025 ರವರೆಗೆ ವಿಸ್ತರಿಸಲಾಗಿದೆ.
ಇಂಗ್ಲೆಂಡ್‌ನ ಪ್ರಸಿದ್ಧ ಕೋಚ್ ಕ್ರಿಸ್ ಸಿಲ್ವರ್‌ವುಡ್ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಸಿಲ್ವರ್‌ವುಡ್’ಗೆ ವಾರ್ಷಿಕ 50 ಲಕ್ಷ ರೂ.ಗೂ ಹೆಚ್ಚು ಸಂಭಾವನೆ ನೀಡುತ್ತದೆ.