ಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿ
ಮಾಜಿ ಭಾರತೀಯ ಆಲ್ ರೌಂಡರ್ ಇರ್ಫಾನ್ ಪಠಾಣ್ ನಿವೃತ್ತಿಯ ನಂತರವೂ ಆಗಾಗ್ಗೆ ಕಾಮೆಂಟರಿ ಬಾಕ್ಸ್’ನಲ್ಲಿ ಕಾಣಿಸಿಕೊಳ್ಳುವುದನ್ನು ನೋಡಿರಬಹುದು. ಅಂದಹಾಗೆ ನಾವಿಂದು ಈ ವರದಿಯಲ್ಲಿ ಇರ್ಫಾನ್ ಪಠಾಣ್ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಇರ್ಫಾನ್ ಪಠಾಣ್ ಇತ್ತೀಚೆಗೆ ತಮ್ಮ ಮದುವೆಯ 8ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ತಮ್ಮ ಪತ್ನಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋದಲ್ಲಿ ಇರ್ಫಾನ್ ಪಠಾಣ್ ಅವರ ಪತ್ನಿ ನಿಖಾಬ್ ಧರಿಸದೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇರ್ಫಾನ್ ಪಠಾಣ್ ಪತ್ನಿ ನಿಖಾಬ್ ಇಲ್ಲದೆ ಕಾಣಿಸಿಕೊಂಡಿರುವುದು ಇದೇ ಮೊದಲು.
ಇರ್ಫಾನ್ ಪಠಾಣ್ ಅವರ ಪತ್ನಿಯ ಹೆಸರು ಸಫಾ ಬೇಗ್. 2016ರಲ್ಲಿ ಇವರಿಬ್ಬರು ವಿವಾಹವಾಗಿದ್ದರು. ಇರ್ಫಾನ್ ಈ ಹಿಂದೆಯೂ ಸಹ ಸಫಾ ಬೇಗ್ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ನಿಖಾಬ್ ಇಲ್ಲದೆ ಕಾಣಿಸಿಕೊಂಡಿರುವುದು ಇದೇ ಮೊದಲು.
ಇನ್ನು ಸಫಾ ಬ್ಯೂಟಿ ಕಂಡ ನೆಟ್ಟಿಗರು, ಈಕೆ ಯಾವುದೇ ಬಾಲಿವುಡ್ ನಟಿಗಿಂತ ಕಡಿಮೆಯಿಲ್ಲ ಎಂದು ಹೊಗಳುತ್ತಿದ್ದಾರೆ.