ಇವರೇ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಪತ್ನಿ: ಅಂದು ವಿಶ್ವಕಪ್ ಮುಗಿದಿದ್ದೇ ತಡ... ರಾಜಮನೆತನದ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ರು ಗಂಭೀರ್
ಭಾರತೀಯ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ನೇಮಕ ಮಾಡಿದೆ. ಇವರ ಮುಂದಾಳತ್ವದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಗೆದ್ದರೆ, ಸದ್ಯ ಏಕದಿನ ಸರಣಿ ಆಡುತ್ತಿದೆ.
ಟಿ-20 ವಿಶ್ವಕಪ್ʼನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಚಾಂಪಿಯನ್ ಮಾಡಿದ ರಾಹುಲ್ ದ್ರಾವಿಡ್ ಅವರ ನಂತರ ಗಂಭೀರ್ ಅವರನ್ನು ನೇಮಿಸಲಾಗಿದೆ.
ಭಾರತ ತಂಡ ಟಿ20 ವಿಶ್ವಕಪ್ 2007 ಮತ್ತು ODI ವಿಶ್ವಕಪ್ 2011 ಟ್ರೋಫಿಗಳನ್ನು ಎತ್ತಿ ಹಿಡಿದಾಗ ಗಂಭೀರ್ ವಿಜೇತ ತಂಡದ ಭಾಗವಾಗಿದ್ದರು. ಎರಡೂ ಪಂದ್ಯಾವಳಿಗಳ ಫೈನಲ್ʼನಲ್ಲಿ ಪಂದ್ಯಶ್ರೇಷ್ಠ ಇನ್ನಿಂಗ್ಸ್ ಆಡಿದ್ದರು. 2007ರ ಟಿ20 ವಿಶ್ವಕಪ್ʼನ ಫೈನಲ್‌ನಲ್ಲಿ ಗೌತಮ್ ಗಂಭೀರ್ 54 ಎಸೆತಗಳಲ್ಲಿ 75 ರನ್ ಗಳಿಸಿದ್ದರೆ, 2011 ರ ಏಕದಿನ ವಿಶ್ವಕಪ್ʼನ ಫೈನಲ್‌ನಲ್ಲಿ, 122 ಎಸೆತಗಳಲ್ಲಿ 97 ರನ್‌ಗಳನ್ನು ಗಳಿಸಿದ್ದರು.
ಇನ್ನು ಇವರ ಪತ್ನಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಪತ್ನಿ ಹೆಸರು ನತಾಶಾ ಜೈನ್. ತಮ್ಮ ತಂದೆಯ ಸ್ನೇಹಿತೆಯ ಮಗಳನ್ನೇ ಪ್ರೀತಿಸಿ ವರಿಸಿದ್ದರು ಗಂಭೀರ್.
ಇನ್ನು 2018 ರಲ್ಲಿ ನತಾಶಾ ಜೈನ್ ಅವರನ್ನು ಗಂಭೀರ್ ವಿವಾಹವಾದರು. ನತಾಶಾ ಜೈನ್ ರಾಜಮನೆತನಕ್ಕೆ ಸೇರಿದವರು.
ಇನ್ನು ಗೌತಮ್ ಗಂಭೀರ್ 150 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಐಪಿಎಲ್ ಹಾಗೂ ದೇಶೀಯ ಪಂದ್ಯಗಳ ಶುಲ್ಕಗಳ ಹೊರತಾಗಿಯೂ ಗಂಭೀರ್ ಉತ್ತಮ ಸಂಪಾದನೆ ಮಾಡುತ್ತಾರೆ.