ಟೀಂ ಇಂಡಿಯಾದ ವೇಗಿ ದೀಪಕ್ ಚಹಾರ್ ಸಹೋದರಿ ಸಿನಿರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಯಾರೆಂದು ತಿಳಿಯಿತೇ?

Sat, 22 Jun 2024-3:11 pm,

ಭಾರತೀಯ ಕ್ರಿಕೆಟ್‌’ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಭಾರತೀಯ ಕ್ರಿಕೆಟಿಗ ದೀಪಕ್ ಚಹಾರ್ ಅವರು ದೇಶೀಯ ಕ್ರಿಕೆಟ್‌’ನಲ್ಲಿ ರಾಜಸ್ಥಾನ ಮತ್ತು ಐಪಿಎಲ್‌’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.

ಅಂದಹಾಗೆ ಈ ವರದಿಯಲ್ಲಿ ದೀಪಕ್ ಚಹಾರ್ ಸಹೋದರಿ ಮಾಲ್ತಿ ಚಹಾರ್ ಬಗ್ಗೆ  ಮಾಹಿತಿ ನೀಡಲಿದ್ದೇವೆ.

ಮಾಲ್ತಿ ಉತ್ತರ ಪ್ರದೇಶದ ಆಗ್ರಾದಲ್ಲಿ 15 ನವೆಂಬರ್ 1990 ರಂದು ಜನಿಸಿದರು. ಇವರ ಕಿರಿಯ ಸಹೋದರ ದೀಪಕ್ ಚಹಾರ್. ಬಾಲ್ಯದ ಶಿಕ್ಷಣವನ್ನು ಆಗ್ರಾದ ಕೇಂದ್ರೀಯ ವಿದ್ಯಾಲಯದಲ್ಲಿ ಪಡೆದ ಮಾಲ್ತಿ, ಬಾಲ್ಯದಿಂದಲೂ ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದರು.

ದೀಪಕ್ ಚಹಾರ್ ಅವರಂತೆ, ಮಾಲ್ತಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಾಲ್ತಿ ಅವರು ಲಕ್ನೋದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ ಸಾಫ್ಟ್‌ವೇರ್ ಎಂಜಿನಿಯರಿಂಗ್‌’ನಲ್ಲಿ ಪದವೀಧರರಾಗಿದ್ದಾರೆ.

ಮಾಲ್ತಿ ಕೂಡ ರಾಷ್ಟ್ರೀಯ ಮಟ್ಟದ ಹೈ-ಜಂಪ್ ಮತ್ತು ಶಾಟ್-ಪುಟ್ ಆಟಗಾರ್ತಿ. ಅಷ್ಟೇ ಅಲ್ಲದೆ, ಈಕೆ ನಟಿ ಮತ್ತು ರೂಪದರ್ಶಿಯೂ ಹೌದು. ವೆಬ್ ಸಿರೀಸ್, ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಮಾಲ್ತಿ ಚಹರ್ ಅವರು Letsmary.com ಸೇರಿದಂತೆ ಅನೇಕ ವೆಬ್ ಸರಣಿಗಳು ಮತ್ತು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪ್ರಸಿದ್ಧ ಜಾಹೀರಾತುಗಳೆಂದರೆ ವಿಶಾಕಾ ವಿಬೋರ್ಡ್, ದಿ ಡಾಬರ್ ರೆಡ್ ಟೂತ್‌ಪೇಸ್ಟ್ ಇತ್ಯಾದಿ

ಮಾಲ್ತಿ ಚಹರ್ ಅವರ ಚೊಚ್ಚಲ ಚಿತ್ರ 2017 ರಲ್ಲಿ ಬಿಡುಗಡೆಯಾದ 'ಮ್ಯಾನಿಕ್ಯೂರ್'. ಇದಲ್ಲದೆ,'ಜೀನಿಯಸ್' ಮತ್ತು 'ಹುಶ್' ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಮಾಲ್ತಿ ಚಹಾರ್ ಫೆಮಿನಾ ಮಿಸ್ ಇಂಡಿಯಾ ದೆಹಲಿ 2014 ರ ಎರಡನೇ ರನ್ನರ್ ಅಪ್ ಆಗಿದ್ದರು. ಇದಲ್ಲದೆ, ಫೆಮಿನಾ ಮಿಸ್ ಫೋಟೋಜೆನಿಕ್ ಮತ್ತು ಮಿಸ್ ಸುಡೋಕು ವಿಜೇತರಾಗಿದ್ದಾರೆ. 2009 ರಲ್ಲಿ ಮಿಸ್ ಇಂಡಿಯಾ ಅರ್ಥ್ ಪ್ರಶಸ್ತಿಯನ್ನು ಗೆದ್ದರು.  ಮಾಲ್ತಿ ಚಹರ್ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್’ನ್ನು ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link