Team India: ಟೀಂ ಇಂಡಿಯಾದ ಈ ಸೂಪರ್‌ಸ್ಟಾರ್‌ಗೆ ರೋಹಿತ್ `ವಿಲನ್`! ಟೆಸ್ಟ್ ವೃತ್ತಿಜೀವನ ಅಂತ್ಯ?

Sat, 25 Feb 2023-8:27 am,

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಸಂಕಷ್ಟದ ಹಾದಿಯಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ಫ್ಲಾಪ್ ಆಗಿದ್ದಾರೆ. ಕೆಲವು ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರಿಂದ ರಾಹುಲ್ ತೀವ್ರ ಟೀಕೆಗೂ ಗುರಿಯಾಗುತ್ತಿದ್ದಾರೆ. ರಾಹುಲ್ ಬ್ಯಾಟ್ ಮೌನವಾಗಿದ್ದು, ರನ್ ಗಳಿಸಲು ಪರದಾಡುವ ಪರಿಸ್ಥಿತಿಯುಂಟಾಗಿದೆ. ಕಳೆದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಸರಾಸರಿ ಕೇವಲ 12.5 ಆಗಿದ್ದು, ಈ ಅವಧಿಯಲ್ಲಿ ಕನಿಷ್ಠ ಅರ್ಧ ಶತಕವನ್ನು ಗಳಿಸಿಲ್ಲ.   

ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಬ್ಬರೂ ಈಗ ಕೆ.ಎಲ್.ರಾಹುಲ್ ಅವರ ಟೆಸ್ಟ್ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ವಾಸ್ತವವಾಗಿ ರಾಹುಲ್‍ರನ್ನು ಆಡುವ 11ರ ಬಳಗದಿಂದ ಹೊರಗಿಡುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಒಂದು ವೇಳೆ ಅವರು ಹೊರ ಹೋದರೆ ಶುಭಮನ್ ಗಿಲ್‌ಗೆ ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಗಬಹುದು. ಇಂದೋರ್ ಟೆಸ್ಟ್ ನಲ್ಲಿ ಗಿಲ್ ಭರ್ಜರಿ ಇನ್ನಿಂಗ್ಸ್ ಆಡಿದರೆ 4ನೇ ಟೆಸ್ಟ್ ನಲ್ಲೂ ಆಡುವುದು ಖಚಿತವಾಗಲಿದೆ. ಅಷ್ಟೇ ಅಲ್ಲ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಬಹುದು.

ಕೆ.ಎಲ್.ರಾಹುಲ್ ಕಳೆದ 10 ಇನ್ನಿಂಗ್ಸ್‌ಗಳಲ್ಲಿ 8, 10, 12, 22, 23, 10, 2, 20, 17 ಮತ್ತು 1 ರನ್ ಗಳಿಸಿದ್ದಾರೆ. ಇದರಿಂದಾಗಿ ಪ್ಲೇಯಿಂಗ್-11ರಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಶುಭಮನ್ ಗಿಲ್ ಅವರನ್ನು 11ರ ಬಳಗದಲ್ಲಿ ಸೇರಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟಿಕೆಟ್ ಪಡೆಯಲು ಇಂದೋರ್‌ನಲ್ಲಿ ನಡೆಯಲಿರುವ ಪಂದ್ಯವನ್ನು ಭಾರತ ಗೆಲ್ಲುವುದು ಅವಶ್ಯಕ. ಸತತ 2 ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ.  

ದೆಹಲಿ ಟೆಸ್ಟ್ ನಂತರ ಸರಣಿಯ ಉಳಿದ 2 ಪಂದ್ಯಗಳಿಗೆ ತಂಡ ಪ್ರಕಟಿಸಿದಾಗ ಬಿಸಿಸಿಐ ದೊಡ್ಡ ಬದಲಾವಣೆ ಮಾಡಿತ್ತು. ಸರಣಿಯ ಉಳಿದ 2 ಟೆಸ್ಟ್ ಪಂದ್ಯಗಳಿಗೆ ತಂಡ ಪ್ರಕಟಿಸಿದಾಗ ಕೆ.ಎಲ್.ರಾಹುಲ್ ಹೆಸರಿನ ಮುಂದೆ ಉಪನಾಯಕನೆಂದು ಇರಲಿಲ್ಲ. ಇದೀಗ 11ರ ಬಳಗದಲ್ಲಿಯೂ ರಾಹುಲ್ ಸ್ಥಾನಕ್ಕೆ ಕುತ್ತು ಬಂದಿದೆ. ಹೀಗಾಗಿ ಇದೀಗ ಎಲ್ಲರ ಕಣ್ಣು ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾರ ಮೇಲಿದೆ. ರಾಹುಲ್ ವೃತ್ತಿಜೀವನದ ಬಗ್ಗೆ ಅವರು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link