ಓದಿದ್ದು ಬಿ.ಟೆಕ್, ಆಗಿದ್ದು ಕ್ರಿಕೆಟರ್: 2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಈ ಸ್ಪಿನ್ನರ್ ಆಸ್ತಿ ಮೌಲ್ಯ ಬರೋಬ್ಬರಿ 120 ಕೋಟಿ!
ಜಾಗತಿಕ ವೇದಿಕೆಯಲ್ಲಿ ಟೀಂ ಇಂಡಿಯಾಗೆ ಹೆಸರು ತಂದುಕೊಟ್ಟ ಅನೇಕ ಕ್ರಿಕೆಟಿಗರಿದ್ದಾರೆ. ಅದರಲ್ಲಿ ಒಬ್ಬರು ರವಿಚಂದ್ರನ್ ಅಶ್ವಿನ್. 2010ರ ಜೂನ್ ತಿಂಗಳಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಮೂಲಕ ಟೀಂ ಇಂಡಿಯಾಗೆ ಅಧಿಕೃತ ಪ್ರವೇಶ ಪಡೆದರು.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಪ್ರಮುಖ ವಿಕೆಟ್-ಟೇಕರ್ ಕಾಣಿಸಿಕೊಂಡಿದ್ದಲ್ಲದೆ, ಅವರ ಉತ್ತಮ ಬೌಲಿಂಗ್ ಅನ್ನು ಇಡೀ ಕ್ರಿಕೆಟ್ ಲೋಕವೇ ಕೊಂಡಾಡಿತ್ತು. ಇಂತಹ ಬಲ ಪ್ರದರ್ಶನದಿಂದಲೇ 2011 ರ ಭಾರತದ ವಿಶ್ವಕಪ್ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆದುಕೊಂಡರು.
ನವೆಂಬರ್ 2011ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಅಂತಿಮವಾಗಿ ತಮ್ಮ ಟೆಸ್ಟ್ ಕ್ಯಾಪ್ ಪಡೆದರು. ದೆಹಲಿಯಲ್ಲಿ ಟೆಸ್ಟ್’ಗೆ ಪಾದಾರ್ಪಣೆ ಮಾಡಿದ ಅಶ್ವಿನ್ ಒಂಬತ್ತು ವಿಕೆಟ್’ಗಳನ್ನು ಕಬಳಿಸಿದರು. ಮೂರನೇ ಟೆಸ್ಟ್‌ನಲ್ಲಿ, ಮೊದಲ ಇನ್ನಿಂಗ್ಸ್’ನಲ್ಲಿ 5-ವಿಕೆಟ್’ಗಳನ್ನು ಕಬಳಿಸಿ ಮಹಾ ದಾಖಲೆ ಬರೆದರು.
ಮೊದಲ ಟೆಸ್ಟ್ ಸರಣಿಯಲ್ಲಿಯೇ ಅಶ್ವಿನ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅಂದಿನಿಂದ ಭಾರತದ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹರ್ಭಜನ್ ಸಿಂಗ್ ಸ್ಥಾನಕ್ಕೆ ಹೇಳಿ ಮಾಡಿಸಿದಂತಿದ್ದರು ಹರ್ಭಜನ್ ಸಿಂಗ್.
2012 ರ ಕೊನೆಯಲ್ಲಿ, ಅಶ್ವಿನ್ 50 ಟೆಸ್ಟ್ ವಿಕೆಟ್’ಗಳನ್ನು ಗಳಿಸಿದ ಭಾರತದ ವೇಗದ ಬೌಲರ್ ಎಂದೆನಿಸಿಕೊಂಡರು. ಈ ಮೂಲಕ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದರು. ನಂತರದ ವರ್ಷ ಅವರು ತಮ್ಮ 100ನೇ ಟೆಸ್ಟ್ ವಿಕೆಟ್ ಕಬಳಿಸಿ ಮತ್ತೊಮ್ಮೆ ಅತ್ಯಂತ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಪ್ರಮುಖ ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು.
ಅಶ್ವಿನ್ ವಿಶ್ವ ಕ್ರಿಕೆಟ್’ನ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. 2015 ರಲ್ಲಿ ಫ್ರೀಡಂ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವಾಗ, ಭಾರತದ ಸ್ಟಾರ್ ಪರ್ಫಾರ್ಮರ್ ಆಗಿದ್ದರು. 2016 ರಲ್ಲಿ ICC ವರ್ಷದ ಕ್ರಿಕೆಟಿಗ ಮತ್ತು ICC ವರ್ಷದ ಟೆಸ್ಟ್ ಕ್ರಿಕೆಟಿಗ ಎಂದು ಹೆಸರಿಸಲ್ಪಟ್ಟರು.
ಇನ್ನು ಅಶ್ವಿನ್ ಅವರ ವಿದ್ಯಾಭ್ಯಾಸ ನೋಡಿದ್ರೆ ಶಾಕ್ ಆಗೋದು ಖಂಡಿತ. ಪದ್ಮಾ ಶೇಷಾದ್ರಿ ಬಾಲಭವನ ಮತ್ತು ಸೇಂಟ್ ಬೇಡಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು, ಚೆನ್ನೈನ ಎಸ್‌ಎಸ್‌ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್’ನಲ್ಲಿ ವ್ಯಾಸಂಗ ಮಾಡಿ, ಮಾಹಿತಿ ತಂತ್ರಜ್ಞಾನದಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ.
ಇನ್ನು ರವಿಚಂದ್ರನ್ ಅಶ್ವಿನ್ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು $16 ಮಿಲಿಯನ್ (₹ 120 ಕೋಟಿ) ಇದೆ ಎಂದು ಹೇಳಲಾಗುತ್ತದೆ.