ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಪತ್ನಿ ಯಾರು ಗೊತ್ತೇ? ಸೌಂದರ್ಯಕ್ಕೆ ಮತ್ತೊಂದು ಹೆಸರೇ ಈಕೆ... ಫೇಸ್ಬುಕ್‌ನಿಂದ ಶುರುವಾಗಿತ್ತು ಇವರ ಲವ್‌!

Sun, 13 Oct 2024-1:39 pm,

ಕಳೆದ ದಿನ ಹೈದರಾಬಾದ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20 ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಚೊಚ್ಚಲ ಟಿ20 ಶತಕ ಬಾರಿಸಿದ್ದರು. ಅಷ್ಟೇ ಅಲ್ಲದೆ 2ನೇ ಅತಿ ವೇಗದ ಶತಕ ಗಳಿಸಿದ ದಾಖಲೆಯನ್ನೂ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಇನ್ನು ಸ್ಯಾಮ್ಸನ್‌ ಅವರ ವೈಯಕ್ತಿಕ ವಿಚಾರಕ್ಕೆ ಬಂದರೆ, ಅವರ ಪ್ರೀತಿ ಮತ್ತು ಮದುವೆ ವಿಚಾರ ಕೊಂಚ ಆಸಕ್ತಿದಾಯಕ ಎನಿಸುತ್ತದೆ. ಏಕೆಂದರೆ ಇವರ ಪ್ರೇಮಕಥೆಗೆ ಮುನ್ನುಡಿ ಬರೆದಿದ್ದು ಫೇಸ್‌ಬುಕ್.

 

ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸಿದ್ದಾರೆ. 47 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ 111 ರನ್ ಗಳಿಸಿದ ಅವರು ಈ ಶತಕದ ನಂತರ ಟಾಕ್‌ ಆಫ್‌ ದಿ ಟೌನ್‌ ಎನಿಸಿಕೊಂಡಿದ್ದಾರೆ.

 

ಸಂಜು ಸ್ಯಾಮ್ಸನ್ ಅವರ ಪತ್ನಿ ಹೆಸರು ಚಾರುಲತಾ. ಸಂಜು ಅವರಂತೆಯೇ ಚಾರುಲತಾ ಕೂಡ ಕೇರಳದವರು. ಸಂಜು ಮತ್ತು ಚಾರುಲತಾ ಮೊದಲು ಭೇಟಿಯಾದದ್ದು ತಿರುವನಂತಪುರಂನ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ.

 

ಈ ಮೊದಲ ಭೇಟಿಯ ನಂತರ ಸಂಜು ಚಾರುಲತಾಗೆ ಫೇಸ್‌ಬುಕ್ ರಿಕ್ವೆಸ್ಟ್ ಕಳುಹಿಸಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಆ ನಂತರ ಕ್ರಮೇಣ ಸ್ನೇಹ ಪ್ರೇಮದತ್ತ ಮುಖ ಮಾಡಿತ್ತು.

 

ಕೊನೆಗೆ 2018 ರಲ್ಲಿ, ಸಂಜು ಮತ್ತು ಚಾರುಲತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅದಕ್ಕೂ ಮುನ್ನ ಇಬ್ಬರೂ ಸುಮಾರು ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link