KL Rahul: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ತಂದೆ-ತಾಯಿ ಯಾರು? ಏನ್ ಕೆಲಸ ಮಾಡ್ತಾರೆ ಗೊತ್ತಾ?
ಟೀಂ ಇಂಡಿಯಾ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಹುಟ್ಟಿದ್ದು ಮಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ... ಇತ್ತೀಚೆಗಷ್ಟೇ ಇವರು ತಮ್ಮ ಬಹುಕಾಲದ ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಅವರನ್ನು ವಿವಾಹವಾದರು..
ಕೆಎಲ್ ರಾಹುಲ್ ಅವರ ಕುಟುಂಬದ ಹಿನ್ನೆಲೆ ಶೈಕ್ಷಣಿಕವಾಗಿ ಪ್ರಬಲವಾಗಿದೆ, ಅವರ ಪೋಷಕರು ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು...
ಹೌದು ಕೆ ಎಲ್ ರಾಹುಲ್ ಅವರ ತಂದೆ ಡಾ ಕೆಎನ್ ಲೋಕೇಶ್.. ತಾಯಿ ರಾಜೇಶ್ವರಿ.. ಇಬ್ಬರೂ ಪ್ರಾಧ್ಯಾಪಕರು... ತಂದೆ ಡಾ.ಕೆ.ಎನ್.ಲೋಕೇಶ್ ಕರ್ನಾಟಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದು, ತಾಯಿ ರಾಜೇಶ್ವರಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ..
ಕೆಎಲ್ ರಾಹುಲ್ ಅವರಿಗೆ ಭಾವನಾ ಎಂಬ ಅಕ್ಕ ಇದ್ದಾರೆ. ರಕ್ಷಾಬಂಧನದಂದು ಅವರ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದರು..
ಇನ್ನು ರಾಹುಲ್ ಹುಟ್ಟಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ. ನಂತರ ಅವರು ಮಂಗಳೂರಿಗೆ ತೆರಳಿದರು, ಅಲ್ಲಿ ಅವರು ತಮ್ಮ ಶಾಲಾ ಶಿಕ್ಷಣ ಮತ್ತು ಪೂರ್ವ-ಯೂನಿವರ್ಸಿಟಿ ಶಿಕ್ಷಣವನ್ನು ಪಡೆದರು.