ವಿಶ್ವಕಪ್ ಸ್ಟಾರ್ ಕ್ರಿಕೆಟರ್ ವೃತ್ತಿಜೀವನ ಅಂತ್ಯ..ಏನಿದು ನಿಮ್ಮ ನಡೆ ಎಂದು ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ!
2023 ವಿಶ್ವಕಪ್‌ನಲ್ಲಿ ತನ್ನ ಬೌಲಿಂಗ್‌ನಿಂದ ಎದುರಾಳಿಗಳ ಬೆವರಿಳಿಸಿದ್ದ ಮೊಹಮ್ಮದ್ ಶಮಿ, ಪಂದ್ಯದ ವೇಲೆ ಆದ ಗಾಯಕ್ಕೆ ತುತ್ತಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇಷ್ಟು ದಿನ ವಿಶ್ರಾಂತಿ ಪಡೆದಿದ್ದರು.
ವಿಶ್ವಕಪ್‌ನಲ್ಲಿ ಭಾರತ ತಂಡ ಸೋತಿದ್ದರು, ಭಾರತ ತಂಡದ ಬೌಲರ್‌ಗಳು ತಮ್ಮ ಬೌಲಿಂಗ್ ಸಾಮರ್ತ್ಯದಿಂದ ಪರಾಕ್ರಮ ಮೆರೆದಿದ್ದರು. ಅದರಲ್ಲಂತೂ ಮೊಹಮ್ಮದ್ ಸಮಿ ತಮ್ಮ ಬಿರುಸಿನ ಬೌಲಿಂಗ್ ದಾಲಿಯಿಂದ ಎದುರಾಳಿ ತಂಡದ ಆಟಗಾರರ ಎದೆ ನಡುಗಿಸಿದ್ದರು.
ವಿಶ್ವಕಪ್ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಮೊಹಮ್ಮದ್ ಶಮಿ ಶಸ್ತ್ರ ಚಿಕಿತ್ಸೆಯ ನಂತರ ವಿಶ್ರಾಂತಿ ಪಡೆದು ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಇದೀಗ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಹಿಂತಿರುಗಲು ಸಜ್ಜಾಗಿದ್ದಾರೆ.
ಶಸ್ತ್ರ ಚಿಕಿತ್ಸೆಯಿಂದ ಪರಿಪೂರ್ಣವಾಗಿ ಚೇತರಿಸಿಕೊಂಡಿರುವ ಶಮಿ ಇದೀಗ ಮತ್ತೆ ಅಭ್ಯಾಸ ಶುರುವಚ್ಚಿದ್ದಾರೆ. ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಸ್ಟಾರ್ ವೇಗಿ ಲಭ್ಯವಾಗಲಿದ್ದಾರೆ.
ಆದರೆ ಶಮಿ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡುತ್ತಾರಾ? ಅಥವಾ? ಇದು ಸಂಪೂರ್ಣವಾಗಿ ಅವನ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಈ ಸ್ಪೀಡ್‌ಸ್ಟರ್ ಫಿಟ್ ಆಗಿದ್ದರೆ ಟೀಂ ಇಂಡಿಯಾಗೆ ಮರುಪ್ರವೇಶ ಮಾಡುವುದು ಖಚಿತ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.
ಸ್ಪೀಡ್‌ಸ್ಟರ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ, ಅವರು ರಾಷ್ಟ್ರೀಯ ತಂಡಕ್ಕೆ ಮರು ಪ್ರವೇಶಿಸುತ್ತಾರೆ. ಶಮಿ ತಂಡದಲ್ಲಿ ಆಡುತ್ತಾರಾ ಎಲ್ಲವಾ ಎಂಬುದು ಸಂಪೂರ್ನವಾಗಿ ಅವರ ಫಿಟ್‌ನೆಸ್ ಮೇಲೆ ಆವಲಂಭಿತವಾಗಿದೆ. ಎನ್‌ಸಿಎ ವರದಿಯ ನಂತರ ನಾವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜಯ್ ಶಾ ಎಎನ್‌ಐಗೆ ತಿಳಿಸಿದ್ದಾರೆ.
ನವೆಂಬರ್‌ನಲ್ಲಿ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಟೀಂ ಇಂಡಿಯಾ ಸಿದ್ಧವಾಗುತ್ತಿದೆ. ಇಷ್ಟು ದಿನ ವಿಶ್ರಾಂತಿ ಪಡೆದಿದ್ದ ಬುಮ್ರಾ ಮತ್ತೆ ತಂಡ ಸೇರಲಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ತಂಡ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದೆ. ಈ ಪ್ರವಾಸದಿಂದ ಭಾರತದ ಟೆಸ್ಟ್ ಋತು ಆರಂಭವಾಗಲಿದೆ. ಇದರೊಂದಿಗೆ ಬಾಂಗ್ಲಾದೇಶದೊಂದಿಗಿನ ಟೆಸ್ಟ್ ಸರಣಿಗೆ ಶಮಿ ಲಭ್ಯರಾಗಬಹುದು ಎಂಬ ವರದಿಗಳಿವೆ.
ಆದರೆ ದುಲೀಪ್ ಟ್ರೋಫಿ ಜತೆಗೆ ಬಾಂಗ್ಲಾದೇಶ ಸರಣಿಯಲ್ಲಿ ಶಮಿ ಆಡುವ ಸಾಧ್ಯತೆ ಇಲ್ಲ. ಅಕ್ಟೋಬರ್ ಅಂತ್ಯದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ಟೆಸ್ಟ್ ಸರಣಿಗೂ ಮುನ್ನ ಶಮಿ ಫಿಟ್ ಆಗಿದ್ದರೆ ರಣಜಿ ಟ್ರೋಫಿ ಆಡಬಹುದು ಎಂದು ತಿಳಿದುಬಂದಿದೆ.
ಕಳೆದ ವರ್ಷ ನವೆಂಬರ್ 19 ರಂದು ನಡೆದ ಏಕದಿನ ವಿಶ್ವಕಪ್ ಫೈನಲ್‌ನ ನಂತರ ಶಮಿ ಕ್ರಿಕೆಟ್ ಆಡಿಲ್ಲ. ಪಂದ್ಯಾವಳಿಯ ವೇಳೆ ಅವರು ಪಾದದ ಗಾಯದಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆಯ ನಂತರ ಅವರು ಈಗ ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶೀಘ್ರದಲ್ಲೇ ರೀ ಎಂಟ್ರಿ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಭಾರತ ಕ್ರಿಕೆಟ್ ತಂಡವಿದೆ.