ಪತ್ನಿಯಿಂದ ವಿಚ್ಛೇದನ, ಸೂಸೈಡ್ ಪ್ಲ್ಯಾನ್! ಆದ್ರೆ ಇಂದು ವಿಶ್ವಕಪ್’ನಲ್ಲಿ ಈತನೇ ಟೀಂ ಇಂಡಿಯಾದ ಗೆಲುವಿನ ರೂವಾರಿ!
ಪ್ರಸ್ತುತ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜೊತೆಗೆ ಆಡಿರುವ ಆರೂ ಪಂದ್ಯಗಳಲ್ಲೂ ವಿಜಯಶಾಲಿಯಾಗಿದೆ. ನಾವಿಂದು ಈ ವರದಿಯಲ್ಲಿ ಟೀಂ ಇಂಡಿಯಾದ ಗೆಲುವಿನ ರುವಾರಿ ಒಬ್ಬರ ಬಗ್ಗೆ ಮಾತನಾಡಲಿದ್ದೇವೆ,
ಮೊಹಮ್ಮದ್ ಶಮಿ, ಟೀಂ ಇಂಡಿಯಾದ ಸ್ಟಾರ್ ವೇಗಿ ಇವರು. ಬೌಲಿಂಗ್’ಗೆ ಬಂದ್ರೆ ವಿಕೆಟ್ ಕೀಳೋದು ಪಕ್ಕಾ. ಆದರೆ ಮೈದಾನದಲ್ಲಿ ಮಿಂಚುತ್ತಿರುವ ಮೊಹಮ್ಮದ್ ಶಮಿ ನಿಜಬದುಕು ಹೇಳಿಕೊಳ್ಳುವಷ್ಟು ಸುಂದರವಾಗಿಲ್ಲ.
ಮೊಹಮ್ಮದ್ ಶಮಿ ಯಶಸ್ಸಿನ ಹಿಂದೆ ಅದೆಷ್ಟೋ ನೋವುಗಳಿವೆ. ಶಮಿ ಪತ್ನಿ ಹಸಿನ್ ಜಹಾನ್ ಅವರು ವಿಚ್ಛೇದನ ನೀಡಿದರು, ತಂದೆಯ ಸಾವು ಸಂಭವಿಸಿತು. ಬ್ಯಾಕ್ ಟು ಬ್ಯಾಕ್ ಸೋಲು ಬೆನ್ನೇರಿತು, ಈ ಎಲ್ಲಾ ನೋವಿನ ಮಧ್ಯೆ ಬದುಕೇ ಬೇಡವೆಂದು ಆತ್ಮಹತ್ಯೆಗೂ ಯೋಚಿಸಿದ್ದರು.
ಶಮಿ ಪತ್ನಿ ಹಸಿನ್ ಜಹಾನ್ ಕಳೆದ ಕೆಲ ವರ್ಷಗಳ ಹಿಂದೆ ಕೌಟುಂಬಿಕ ಹಿಂಸೆ, ಪತ್ನಿ ನಿಂದನೆ ಸೇರಿದಂತೆ ಅನೇಕ ಗಂಭೀರ ಆರೋಪಗಳನ್ನು ಶಮಿ ವಿರುದ್ಧ ಮಾಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಮಿ, “ಹಸಿನ್ ಮಾಡಿದ್ದ ಆರೋಪಗಳು ನನ್ನನ್ನು ಘಾಸಿಗೊಳಿಸಿದ್ದವು. ಖಿನ್ನತೆಗೆ ಒಳಗಾಗಿದ್ದೆ, ಅಷ್ಟೇ ಅಲ್ಲದೆ, 3 ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯೋಚಿಸಿದ್ದೆ” ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಮೊಹಮ್ಮದ್ ಶಮಿ ಟೀಂ ಇಂಡಿಯಾದಲ್ಲಿ ಸದ್ಯ ಸೂಪರ್ ಸ್ಟಾರ್ ಆಗಿದ್ದಾರೆ. ಆಡಿರುವ 2 ಪಂದ್ಯಗಳಲ್ಲಿ ಬರೋಬ್ಬರಿ 9 ವಿಕೆಟ್ ಪಡೆದಿದ್ದಾರೆ.