39 ವರ್ಷಗಳ ಬಳಿಕ ಇಂಗ್ಲೆಂಡ್‌ನ ಈ ಮೈದಾನದಲ್ಲಿ ಗೆದ್ದುಬೀಗಿದ ಟೀಂ ಇಂಡಿಯಾ: ಸಂಭ್ರಮದ ಫೋಟೋ ಇಲ್ಲಿವೆ
ಭಾರತ ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಸರಣಿಯನ್ನು ಗೆದ್ದು ಇಂಗ್ಲೆಂಡ್ ನೆಲದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದೆ. ನಾಯಕ ರೋಹಿತ್ ಸರಣಿ ಗೆದ್ದ ನಂತರ ಯುವ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಟ್ರೋಫಿ ಎತ್ತುವ ಅವಕಾಶ ನೀಡಿದರು.
ಸರಣಿ ಗೆಲುವಿನ ನಂತರ, ಆಟಗಾರರು ಸಾಕಷ್ಟು ಮೋಜು ಮಾಡಿದ್ದರು. ಇದೇ ವೇಳೆ ನಾಯಕ ರೋಹಿತ್ ಶರ್ಮಾ ಶಾಂಪೇನ್ ಬಾಟಲಿಓಪನ್ ಮಾಡಿ ಸಂಭ್ರಮಿಸಿದರು. ಪಂದ್ಯದಲ್ಲಿ ಹೀರೋ ತರ ಮಿಂಚಿದ ರಿಷಭ್ ಪಂತ್ ಸಹ ಈ ಸಂಭ್ರಮದಲ್ಲಿ ಕಾಣಿಸಿಕೊಂಡರು.
ಟೀಂ ಇಂಡಿಯಾದ ಈ ಸಂಭ್ರಮದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹಿಂದೆ ಬಿದ್ದಿಲ್ಲ. ದೊಡ್ಡ ಬಾಟಲಿಯನ್ನು ಎತ್ತಿಕೊಂಡು ಸಾಕಷ್ಟು ಮೋಜು ಮಾಡಿದ ಅವರು ಆಟಗಾರರನ್ನು ಹುರಿದುಂಬಿಸುತ್ತಿದ್ದರು.
ಕೊನೆಯ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿದ್ದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು. ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ 8 ವರ್ಷಗಳ ನಂತರ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದರೆ, 39 ವರ್ಷಗಳ ನಂತರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದೆ.
ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 260 ರನ್‌ಗಳ ಗುರಿ ಪಡೆದಿತ್ತು. ಈ ಗುರಿ ಬೆನ್ನತ್ತಿದ ಹಾರ್ದಿಕ್ ಪಾಂಡ್ಯ 71 ರನ್ ಹಾಗೂ ರಿಷಬ್ ಪಂತ್ ಅಜೇಯ 125 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.