ಒಡೆದೋಯ್ತು ಅಭಿಮಾನಿಗಳ ಹೃದಯ... ಫೀಲ್ಡಿಂಗ್‌ ಮಾಡ್ತಿದ್ದಂತೆ ತಲೆಗೆ ಬಡಿದ ಬಾಲ್!‌ `ನಾನು ಸತ್ತೆ...`ಎನ್ನುತ್ತಲೇ ಪ್ರಾಣಬಿಟ್ಟ Team Indiaದ ಸ್ಟಾರ್‌ ಕ್ರಿಕೆಟರ್!‌

Sun, 10 Nov 2024-3:37 pm,

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂತೆಂಥಹ ಕ್ರಿಕೆಟ್‌ ಆಟಗಾರು ಬಂದಿದ್ದಾರೆ. ಕೆಲವರು ಮೈದಾನದಲ್ಲಿ ಛಾಪು ಮೂಡಿಸಿದ್ದರೆ, ಇನ್ನೂ ಕೆಲ ಆಟಗಾರರು ಅವಕಾಶ ವಂಚಿತರಾಗಿ ಸ್ಥಾನ ತೊರೆದಿದ್ದಾರೆ. ಇನ್ನು ಟೀಂ ಇಂಡಿಯಾದ ಕೆಲ ಆಟಗಾರರು ಬಾಲಿವುಡ್‌ ಹೀರೋಗಳೇ ನಾಚುವಷ್ಟು ಸ್ಟೈಲಿಶ್‌ ಆಗಿದ್ದರು. ಅಂತಹವರಲ್ಲಿ ರಾಮನ್ ಲಾಂಬಾ ಕೂಡ ಒಬ್ಬರು.

 

ಟೀಂ ಇಂಡಿಯಾ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ರಾಮನ್ ಲಾಂಬಾ ಹೆಸರನ್ನು ಸೇರಿಸಲು ಸಾಧ್ಯವಾಗದಿದ್ದರೂ, ಅವರ ಪ್ರಭಾವ ಯಾವಾಗಲೂ ಹಾಗೇ ಉಳಿದಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ರಾಮನ್ ಲಾಂಬಾ ಕಂಡ ಸಾವು ಇಂದಿಗೂ ಟೀಂ ಇಂಡಿಯಾವನ್ನು ನಡುಗಿಸುತ್ತದೆ ಎಂದೇ ಹೇಳಬಹುದು.

 

ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಪಂದ್ಯವನ್ನು ಆಡುತ್ತಿದ್ದಾಗ ಚೆಂಡು ನೇರವಾಗಿ ಅವರ ತಲೆಗೆ ಅಪ್ಪಳಿಸಿತ್ತು. ಅಂದಿನಿಂದ ನೋವಿನಲ್ಲೇ ದಿನದೂಡಿದ್ದ ರಾಮನ್ ಲಂಬಾ ಕೆಲವು ದಿನಗಳವರೆಗೆ ಕೋಮಾದಲ್ಲಿಯೇ ಇದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 1998ರ ಫೆಬ್ರವರಿ 23 ರಂದು ನಿಧನರಾದರು.

 

1998 ರಲ್ಲಿ, ರಮಣ್ ಲಂಬಾ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಢಾಕಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಆಡುತ್ತಿದ್ದರು. ಈ ಪಂದ್ಯವು ಫೆಬ್ರವರಿ 20 ರಂದು ಪ್ರಾರಂಭವಾಗಿತ್ತು. ಸ್ಪಿನ್ನರ್ ಸೈಫುಲ್ಲಾ ಖಾನ್ ಬೌಲಿಂಗ್ ಮಾಡಿದಾಗ, ನಾಯಕನ ಕೋರಿಕೆಯ ಮೇರೆಗೆ, ರಾಮನ್ ಲಾಂಬಾ ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡಲು ಬಂದರು.

 

ಅಂದು ಫೀಲ್ಡಿಂಗ್‌ಗೆ ಬಂದ ರಾಮನ್ ಲಾಂಬಾ ಹೆಲ್ಮೆಟ್‌ ಧರಿಸಿರಲಿಲ್ಲ. ಏಕೆಂದರೆ ಓವರ್‌ನ ಅಂತ್ಯಕ್ಕೆ ಕೇವಲ ಮೂರು ಎಸೆತಗಳು ಉಳಿದಿತ್ತು. ಆದರೆ ದುರ್ವಿಧಿ ಹೇಗಿತ್ತೆಂದರೆ.... ಮುಂದಿನ ಎಸೆತದಲ್ಲಿ, ಬ್ಯಾಟ್ಸ್‌ಮನ್ ಪುಲ್ ಶಾಟ್ ಆಡಿದ್ದರು. ಆ ಚೆಂಡು ನೇರವಾಗಿ ರಾಮನ್ ಲಾಂಬಾ ಅವರ ತಲೆಗೆ ಬಡಿದಿತ್ತು. ನೆಲಕ್ಕೆ ಕುಸಿದ ರಾಮನ್ ಲಾಂಬಾ ಕೊನೆಯದಾಗಿ ತಮ್ಮ ಟೀಂ ಮೇಟ್ಸ್‌ಗೆ ಹೇಳಿದ್ದು "ನಾನು ಸತ್ತೆ ಗೆಳೆಯ" ಎಂದು...

 

ರಾಮನ್ ಲಾಂಬಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೆಹಲಿಯ ವಿಶೇಷ ವೈದ್ಯರು ಕೂಡ ಅವರಿಗಾಗಿ ಢಾಕಾಗೆ ಆಗಮಿಸಿದ್ದರು. ಆದರೆ ಯಾವುದೇ ಪ್ರಯೋಜನ ಕಾಣಲಿಲ್ಲ. ರಾಮನ್ ಲಾಂಬಾ ಫೆಬ್ರವರಿ 23, 1998 ರಂದು ನಿಧನರಾದರು.

 

ರಾಮನ್ ಲಾಂಬಾ ಭಾರತದ ಪರ ಕೆಲವೇ ಪಂದ್ಯಗಳನ್ನು ಆಡಿದ್ದಾರೆ.  4 ಟೆಸ್ಟ್ ಪಂದ್ಯಗಳನ್ನು ಆಡಿರುವ ಲಾಂಬಾ 102 ರನ್ ಗಳಿಸಿದ್ದಾರೆ. ಇನ್ನು 32 ಏಕದಿನ ಪಂದ್ಯಗಳನ್ನಾಡಿರುವ ಅವರು 783 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ, ರಾಮನ್ ಲಾಂಬಾ ಅವರ ದಾಖಲೆಯು ಅತ್ಯುತ್ತಮವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ರಾಮನ್ ಲಾಂಬಾ 53 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದರು.

 

ರಾಮನ್ ಲಾಂಬಾ ಅವರ ODI ಮತ್ತು ಟೆಸ್ಟ್ ಚೊಚ್ಚಲ ಎರಡೂ ಸ್ಮರಣೀಯ. 1986 ರಲ್ಲಿ ಕಾನ್ಪುರದಲ್ಲಿ ಶ್ರೀಲಂಕಾ ವಿರುದ್ಧ ರಾಮನ್ ಲಾಂಬಾ ಅವರ ಟೆಸ್ಟ್ ಚೊಚ್ಚಲ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಕೇವಲ 24 ರನ್ ಗಳಿಸಿದರು. ಆದರೆ ಆ ಇನ್ನಿಂಗ್ಸ್‌ನಲ್ಲಿ ಸುನಿಲ್ ಗವಾಸ್ಕರ್ 176 ರನ್, ಮೊಹಮ್ಮದ್ ಅಜರುದ್ದೀನ್ 199 ರನ್ ಮತ್ತು ಕಪಿಲ್ ದೇವ್ 163 ರನ್ ಗಳಿಸಿದ್ದರು.

 

ODI ಚೊಚ್ಚಲ ಪಂದ್ಯದ ಬಗ್ಗೆ ಮಾತನಾಡುವುದಾದರೆ, ರಾಮನ್ ಲಾಂಬಾ 1986 ರಲ್ಲಿ ಜೈಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಆಡಿದರು. ಆಸ್ಟ್ರೇಲಿಯಾ ಭಾರತಕ್ಕೆ 251 ರನ್ ಟಾರ್ಗೆಟ್ ನೀಡಿತ್ತು, ಸುನಿಲ್ ಗವಾಸ್ಕರ್ ಕೇವಲ 26 ರನ್ ಗಳಿಸಿ ಔಟಾದರೆ, ಮತ್ತೋರ್ವ ಆರಂಭಿಕ ಆಟಗಾರ ಕೆ. ಶ್ರೀಕಾಂತ್ ಶತಕ ಗಳಿಸಿದ್ದರು. ಆದರೆ ರಾಮನ್ ಲಾಂಬಾ ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸಿ 64 ರನ್ ಗಳಿಸಿದರು.

 

ರಾಮನ್ ಲಾಂಬಾ ಅವರ ವೃತ್ತಿಜೀವನವು ಉತ್ತಮ ಆರಂಭವನ್ನು ಹೊಂದಿತ್ತಾದರೂ, ಆ ಬಳಿಕ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ನಂತರ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಯಿತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link