ಗರ್ಲ್ ಫ್ರೆಂಡ್ ಮೃತಪಟ್ಟು ವರ್ಷವಾಗಿಲ್ಲ... ಆಗಲೇ ಮತ್ತೊಬ್ಬಳ ಜೊತೆ ಟೀಂ ಇಂಡಿಯಾ ಯಂಗ್ ಓಪನರ್ ಡೇಟಿಂಗ್! ಆತ ಬೇರಾರು ಅಲ್ಲ...
ಟೀಂ ಇಂಡಿಯಾದ ಯಂಗ್ ಓಪನರ್ ಅಭಿಷೇಕ್ ಶರ್ಮಾ ಐಪಿಎಲ್ʼನಲ್ಲಿ ಸನ್‌ರೈಸರ್ಸ್ ಪರ ಆಡಿದ ನಂತರ ಟೀಮ್ ಇಂಡಿಯಾಗೆ ಪ್ರವೇಶಿಸಿದರು. ಅದರಲ್ಲೂ 2024ರ ಸೀಸನ್ ನಲ್ಲಿ ತಮ್ಮ ಆಕ್ರಮಣಕಾರಿ ಪ್ರದರ್ಶನದಿಂದ ಎಲ್ಲರ ಮನಗೆದ್ದಿದ್ದರು ಅಭಿಷೇಕ್ ಶರ್ಮಾ. Abhishek Sharma dating rumours
ಅಂದಹಾಗೆ ಅಭಿಷೇಕ್ ಶರ್ಮಾ ಕಳೆದ ದಿನ ಅಂದರೆ ಸೆಪ್ಟೆಂಬರ್ 4 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಕೆಲ ವೈಯಕ್ತಿಕ ವಿಚಾರಗಳು ಮುನ್ನೆಲೆಗೆ ಬಂದಿದ್ದು, ಅದರಲ್ಲಿ ಒಂದು ಅಭಿಷೇಕ್ ಶರ್ಮಾ ಡೇಟಿಂಗ್ ಸುದ್ದಿ.
ಅಂದಹಾಗೆ ಅಭಿಷೇಕ್ ಶರ್ಮಾ ಕೆಲ ದಿನಗಳ ಹಿಂದೆ ಪೊಲೀಸ್ ತನಿಖೆಯನ್ನು ಎದುರಿಸಿದ್ದರು. ಇದಕ್ಕೆ ಕಾರಣ ಅವರ ಗರ್ಲ್ ಫ್ರೆಂಡ್ ಎನ್ನಲಾದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಮೃತಳ ಫೋನ್ ಪರಿಶೀಲಿಸಿದಾಗ ಅಭಿಷೇಕ್ ಶರ್ಮಾ ಜೊತೆಗಿನ ಸಂಬಂಧದ ಬಗ್ಗೆ ತಿಳಿದುಬಂದಿತ್ತು. ಇದೇ ಕಾರಣದಿಂದ ಪೊಲೀಸರು ವಿಚಾರಣೆ ಮಾಡಿದ್ದರು.
ಆದರೆ ಈ ನೋವಿನಿಂದ ಹೊರಬರುವಷ್ಟರಲ್ಲಿ, ಅಭಿಷೇಕ್ ಮತ್ತೊಬ್ಬಳ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಂದಹಾಗೆ ಈ ಬಗ್ಗೆ ಅಭಿಷೇಕ್ ಯಾವುದೇ ಸ್ಪಷ್ಟನೆಯಾಗಲಿ, ಹೇಳಿಕೆಯಾಗಲಿ ನೀಡಿಲ್ಲ.
ಐಪಿಎಲ್ 2024ರಲ್ಲಿ ಅಭಿಷೇಕ್ ಶರ್ಮಾ ಧೂಳೆಬ್ಬಿಸುವ ಪ್ರದರ್ಶನದ ಮೂಲಕ ಬೌಲರ್ʼಗಳನ್ನು ಬೆಂಡೆತ್ತಿದ್ದು ನಾವೆಲ್ಲರೂ ಕಂಡಿದ್ದೇವೆ. ಇನ್ನು ಈ ಅಭಿಷೇಕ್ ಶರ್ಮಾ ಸದ್ಯ ಮಾಜಿ ಮಿಸ್ ರಾಜಸ್ಥಾನ ರನ್ನರ್ ಅಪ್ ದಿಯಾ ಮೆಹ್ತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಇವೆ.
ಸನ್‌ರೈಸರ್ಸ್ ಹೈದರಾಬಾದ್ʼನ ಫೋಟೋ ಶೂಟ್ ಸಮಯದಲ್ಲಿ ಅಭಿಷೇಕ್ ಶರ್ಮಾ ಮತ್ತು ದಿಯಾ ಒಟ್ಟಿಗೆ ಕಾಣಿಸಿಕೊಂಡಾಗ ಈ ವದಂತಿಗಳು ಇನ್ನಷ್ಟು ಹರಡಿತ್ತು. ದಿಯಾ ಮೆಹ್ತಾ ಮಾಡೆಲ್ ಮತ್ತು ಫ್ಯಾಷನ್ ಸ್ಟೈಲಿಸ್ಟ್ ಆಗಿ ಫ್ಯಾಷನ್ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ.