108MP ಕ್ಯಾಮೆರಾ ಹೊಂದಿರುವ Tecno Spark 20 Pro 5G ಬಿಡುಗಡೆ! ಬೆಲೆ & ವೈಶಿಷ್ಟ್ಯ ತಿಳಿಯಿರಿ

Tue, 09 Jul 2024-11:00 pm,

Tecno Spark 20 Pro 5G ಮೊಬೈಲ್ 6.78 ಇಂಚಿನ ಪೂರ್ಣ HD + LCD ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಲಭ್ಯವಿದೆ. ಇದರೊಂದಿಗೆ ಡಿಸ್ಪ್ಲೇ ಬಳಕೆದಾರರಿಗೆ ಮುಂಭಾಗದ ಪ್ಯಾನಲ್ ಪಂಚ್ ಹೋಲ್ ವಿನ್ಯಾಸವನ್ನು ನೀಡುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾ ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. 

ಈ ಸ್ಮಾರ್ಟ್‌ಫೋನ್ 8GB RAM & 256GB ವರೆಗಿನ ಸ್ಟೋರೇಜ್ ಹೊಂದಿದೆ. ಇದಷ್ಟೇ ಅಲ್ಲದೆ ಇಂಟರ್ನಲ್ ಸ್ಟೋರೇಜ್ ವಿಸ್ತರಿಸಲು ಮೈಕ್ರೊ SD ಕಾರ್ಡ್ ಸ್ಲಾಟ್ ಸಹ ನೀಡಲಾಗಿದೆ. ಮೈಕ್ರೋ SD ಕಾರ್ಡ್ ಸಹಾಯದಿಂದ ಫೋನ್‌ನ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 108MP ಅಲ್ಟ್ರಾ ಸೆನ್ಸಿಂಗ್ ಪ್ರೈಮರಿ ಕ್ಯಾಮೆರಾ ಅಳವಡಿಸಲಾಗಿದೆ. ಇದರೊಂದಿಗೆ ಇದು 2MP ಮತ್ತೊಂದು ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ ಬಳಕೆದಾರರನ್ನು ಬೆರಗುಗೊಳಿಸುವ ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 32MP ಮುಂಭಾಗದ ಕ್ಯಾಮೆರಾ ಲೆನ್ಸ್ ಅನ್ನು ಸಹ ಹೊಂದಿದೆ.

ಈ ಸ್ಮಾರ್ಟ್‌ಫೋನ್ 5000mAhನ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ದೀರ್ಘ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಫೋನ್ ಚಾರ್ಜ್ ಮಾಡಲು 33W ವೇಗದ ಚಾರ್ಜಿಂಗ್ ಬೆಂಬಲವೂ ಇದೆ.

ಭಾರತೀಯ ಮಾರುಕಟ್ಟೆಯಲ್ಲಿ Tecno Spark 20 Pro 5G ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಫೋನ್‌ನ ಆರಂಭಿಕ ಬೆಲೆ 15,999 ರೂ.ಗೆ ನಿಗದಿಪಡಿಸಲಾಗಿದೆ. 2,000 ರೂ. ಬ್ಯಾಂಕ್ ರಿಯಾಯಿತಿಯೊಂದಿಗೆ ಇದನ್ನು 13,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಜುಲೈ 11ರಿಂದ ಸ್ಮಾರ್ಟ್‌ಫೋನ್ ಮೊದಲ ಮಾರಾಟವಾಗಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link