Teeth Care Tips: ಅಪ್ಪಿತಪ್ಪಿಯೂ ಈ ಪಾನೀಯಗಳನ್ನು ಸೇವಿಸಬೇಡಿ, ಹಲ್ಲುಗಳಿಗೆ ಮಾರಕ!
ಡಯಟ್ ಸೋಡಾವು ಆಮ್ಲೀಯ ಗುಣಗಳನ್ನು ಹೊಂದಿದ್ದು, ಅದು ಹಲ್ಲುಗಳ ದಂತಕವಚವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ನೀವು ಆದಷ್ಟು ಡಯಟ್ ಸೋಡಾವನ್ನು ಸೇವಿಸದಿರಲು ಪ್ರಯತ್ನಿಸಿ.
ನೀವು ಸಕ್ಕರೆ ಮತ್ತು ಆಮ್ಲೀಯ ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತೀರಾ? ಇದರ ಬಗ್ಗೆ ನೀವು ಜಾಗರೂಕರಾಗಿರಬೇಕು, ಏಕೆಂದರೆ ಅದು ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಹಾಳುಮಾಡುತ್ತದೆ. ಅದಕ್ಕಾಗಿಯೇ ಸಕ್ಕರೆ ಪಾನೀಯಗಳನ್ನು ಸೇವಿಸಬೇಡಿ.
ಚಹಾ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇಡೀ ಪ್ರಪಂಚದಲ್ಲಿಯೇ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಆದರೆ ಚಹಾ ನಿಮ್ಮ ಹಲ್ಲುಗಳಿಗೆ ತುಂಬಾ ಹಾನಿಕಾರಕ. ಹೀಗಾಗಿಯೇ ಆದಷ್ಟು ಚಹಾ ಸೇವಿಸುವುದರಿಂದ ದೂರವಿರುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ತಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಕಾಫಿ ನಿಮ್ಮ ಹಲ್ಲುಗಳನ್ನು ಹಾಳುಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅತಿಯಾಗಿ ಕಾಫಿ ಸೇವಿಸಿದರೆ ನಿಮ್ಮ ಹಲ್ಲುಗಳಿಗೆ ದೊಡ್ಡ ಹಾನಿಯುಂಟಾಗುತ್ತದೆ.
ಹಲವರಿಗೆ ತುಂಬಾ ತಣ್ಣೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಹೆಚ್ಚು ತಣ್ಣೀರು ಕುಡಿಯುವುದರಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಎಂದಿಗೂ ಹೆಚ್ಚಾಗಿ ತಣ್ಣಗಿರುವ ನೀರನ್ನು ಸೇವಿಸಬಾರದು ಅಂತಾ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.