ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ಕಂಗನಾ ರಣಾವತ್..! ಫೋಟೋಸ್ ಇಲ್ಲಿವೆ
ಬಹುನಿರೀಕ್ಷಿತ ಹಿಂದಿ ಸಿನಿಮಾ 'ತೇಜಸ್' ಬಿಡುಗಡೆ ಹಿನ್ನೆಲೆ ಆಯೋಧ್ಯೆ ಶ್ರೀರಾಮನ ದರ್ಶನ ಪಡೆದ ನಟಿ ಕಂಗನಾ ರಣಾವತ್.
ರಾಮಜನ್ಮಭೂಮಿಗೆ ಭೇಟಿ ಕೊಟ್ಟಿರುವ ನಟಿ ಕಂಗನಾ ಈ ಕುರಿತು ಫೋಟೋಗಳುನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳಲ್ಲಿ ಕಂಗನಾ ಕಸೂತಿ ಬಾರ್ಡರ್ ಮತ್ತು ಪಲ್ಲು ಹೊಂದಿರುವ ಕೇಸರಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಜೈ ಶ್ರೀರಾಮ್ ಎಂದು ಬರೆದಿರುವ ಶಾಲ್ ಹೊದ್ದಿದ್ದಾಳೆ.
“ವಾವ್! ನಾನು ಶ್ರೀ ಹರಿವಿಷ್ಣುವಿನ ಆರ್ಶೀವಾದ ಪಡೆದೆ, ನಾನು ಅವನ ಪರಮ ಭಕ್ತೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮಭೂಮಿಯ ದರ್ಶನವನ್ನು ಪಡೆದಿದ್ದೇನೆ ಎಂದು ಕಂಗನಾ ಧನ್ಯತಾಭಾವ ಮೆರೆದಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿ, "ಅಂತಿಮವಾಗಿ ರಾಮಲಲ್ಲಾ ಮಂದಿರವನ್ನು ನಿರ್ಮಿಸಲಾಗಿದೆ, ಇದು ಹಿಂದೂಗಳ ಶತಮಾನಗಳ ಹೋರಾಟವಾಗಿದೆ ಮತ್ತು ನಮ್ಮ ಪೀಳಿಗೆಯು ಈ ದಿನವನ್ನು ನೋಡಲು ಸಾಧ್ಯವಾಗುತ್ತಿದೆ, ನಾನು ಅಯೋಧ್ಯೆಯ ಬಗ್ಗೆ ಸ್ಕ್ರಿಪ್ಟ್ ಬರೆದಿದ್ದೇನೆ ಮತ್ತು ಸಂಶೋಧನೆ ಕೂಡ ಮಾಡಿದ್ದೇನೆ. .ಇದು 600 ವರ್ಷಗಳ ಸುದೀರ್ಘ ಹೋರಾಟವಾಗಿದ್ದು, ಮೋದಿ ಸರ್ಕಾರ ಮತ್ತು ಸಿಎಂ ಯೋಗಿ ಆದಿತ್ಯನಾಥ್‌ನಿಂದಾಗಿ ಈ ದಿನ ಸಾಧ್ಯವಾಗುತ್ತಿದೆ ಎಂದಿದ್ದಾರೆ.
ಕ್ರಿಶ್ಚಿಯನ್ನರಿಗೆ ವ್ಯಾಟಿಕನ್ ಇರುವಂತಹ ಹಿಂದೂಗಳಿಗೆ ಇದು ಅತಿದೊಡ್ಡ ಯಾತ್ರಾಸ್ಥಳವಾಗಿದೆ... ಇದು ಪ್ರಪಂಚದ ಮುಂದೆ ದೇಶ ಮತ್ತು ಸನಾತನ ಸಂಸ್ಕೃತಿಯ ಭವ್ಯವಾದ ಸಂಕೇತವಾಗಲಿದೆ. ನಮ್ಮ ತೇಜಸ್ ಚಲನಚಿತ್ರದಲ್ಲಿ ರಾಮ ಮಂದಿರವು ಸಹ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ.
ಆರ್‌ಎಸ್‌ವಿಪಿ ನಿರ್ಮಾಣದ 'ತೇಜಸ್' ಸಿನಿಮಾದಲ್ಲಿ ನಟಿ ಕಂಗನಾ ಭಾರತೀಯ ವಾಯುಪಡೆಯ ಅಧಿಕಾರಿ ತೇಜಸ್ ಗಿಲ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಅಕ್ಟೊಬರ್ 27ರಂದು ಈ ಸಿನಿಮಾ ತೆರೆಕಾಣಲಿದೆ.